ಕರ್ನಾಟಕ

karnataka

ETV Bharat / state

ಕೌಟುಂಬಿಕ ಕಲಹ: ಮನೆ ಬಿಟ್ಟೋದ ಪತ್ನಿ.. ಮನನೊಂದು ದುಡುಕಿದ ಪತಿ - bangalore suicide case

ಕೌಟುಂಬಿಕ ಕಲಹ ಹಿನ್ನೆಲೆ ನೆಲಮಂಗಲ ತಾಲೂಕಿನ ಶಿವರಾಂ ಅವರ ಹೆಂಡತಿ ಮನೆ ಬಿಟ್ಟು ಹೋಗಿದ್ದರು. ಹೆಂಡತಿ ಇಲ್ಲದೇ ಮನನೊಂದಿದ್ದ ಶಿವರಾಂ ನೇಣಿಗೆ ಶರಣಾಗಿದ್ದಾನೆ.

shivaram suicide case
ಶಿವರಾಂ ಆತ್ಮಹತ್ಯೆ ಪ್ರಕರಣ

By

Published : Jul 27, 2021, 2:40 PM IST

ನೆಲಮಂಗಲ: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ ಈ ಕಲಹಕ್ಕೆ ಒಂದು ಜೀವ ಬಲಿಯಾಗಿರುವ ಘಟನೆ ತಾಲೂಕಿನ ಡಾಬಸ್‌ಪೇಟೆಯ ಶಿವಗಂಗಾ ವೃತ್ತದಲ್ಲಿ ನಡೆದಿದೆ. ಪತ್ನಿ ದೂರವಾದ ಹಿನ್ನೆಲೆ ಮನನೊಂದ ಗಂಡ ನೇಣಿಗೆ ಶರಣಾಗಿದ್ದಾನೆ.

ಮನೆ ಬಿಟ್ಟೋದ ಪತ್ನಿ.. ಮನನೊಂದು ಪತಿ ಆತ್ಮಹತ್ಯೆ

ಶಿವರಾಂ (42) ನೇಣಿಗೆ ಶರಣಾಗಿರುವ ವ್ಯಕ್ತಿ. ಕೌಟುಂಬಿಕ ಕಲಹ ಹಿನ್ನೆಲೆ ಹೆಂಡತಿ ಮನೆ ಬಿಟ್ಟು ಹೋಗಿದ್ದರು. ಹೆಂಡತಿ ಇಲ್ಲದೇ ಮನನೊಂದಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಳೆದ ಮೂರು ದಿನಗಳಿಂದ ಮನೆಯ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯರು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. 2 ದಿನದ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಡಾಬಸ್​ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details