ಬೆಂಗಳೂರು: ಕೆಲವೊಮ್ಮೆ ಒಬ್ಬರ ಮೇಲಿನ ಅತಿಯಾದ ಪ್ರೀತಿ ಎಂತೆಂಥ ಕೃತ್ಯಗಳನ್ನ ಮಾಡೋಕು ಕಾರಣವಾಗುತ್ತೆ. ಅಕ್ಕನ ಮೇಲೆ ಅತಿಯಾದ ಪ್ರೀತಿ ಇಟ್ಟುಕೊಂಡಿದ್ದ ತಮ್ಮ ಅಕ್ಕನಿಗೆ ಡಿವೋರ್ಸ್ ಕೇಳಿದ ಬಾವನ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಥಳಿತಕ್ಕೊಳಗಾದ ಬಾವ ಸದ್ಯ ಆಸ್ಪತ್ರೆಯ ಬೆಡ್ ಮೇಲೆ ನರಳಾಡುತ್ತಿದ್ದಾನೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನಾಗೇಶ್ ಎಂಬಾತ ಶಿವಮೊಗ್ಗದ ತೀರ್ಥಹಳ್ಳಿಯ ಗೌತಮಿ ಎಂಬುವರನ್ನು 2017ರಲ್ಲಿ ಮದುವೆಯಾಗಿದ್ದ. ಗೌತಮಿ ಕುಟುಂಬಸ್ಥರು ಅಷ್ಟೇ ಪ್ರೀತಿಯಿಂದ ಮದುವೆ ಮಾಡಿಕೊಟ್ಟಿದ್ದರು. ಅಕ್ಕನ ಮೇಲೆ ಅತಿಯಾದ ಪ್ರೀತಿ ಹೊಂದಿರುವ ತಮ್ಮ ಗಗನ್ ಕೂಡ ಅಕ್ಕನ ಬಾಳು ಚೆನ್ನಾಗಿರಲಿ ಅಂತಾ ಅಕ್ಕ-ಬಾವನಿಗೆ ಹಾರೈಸಿದ್ದ. ಆದ್ರೆ, 2019ರಲ್ಲಿ ಗೌತಮಿ-ನಾಗೇಶ್ ದಂಪತಿ ಮಧ್ಯೆ ಕೌಟುಂಬಿಕ ಕಲಹ ಉಂಟಾಗಿತ್ತು. ಗಂಡ-ಹೆಂಡತಿ ಜಗಳ ಕೊನೆಗೂ ನ್ಯಾಯಾಲಯದ ಮೆಟ್ಟಿಲೇರಿ ಡಿವೋರ್ಸ್ಗೆ ಬಂದು ನಿಂತಿದೆ. ಇತ್ತ ಅಕ್ಕನ ಲೈಫ್ ಹಾಳಾಗುತ್ತೆ ಎಂಬ ಭಯದಲ್ಲಿ ಬಾವನ ಮೇಲೆಯೇ ಬಾಮೈದ ಗಗನ್ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ ಅನ್ನುವ ಆರೋಪ ಕೇಳಿ ಬಂದಿದೆ.