ಬೆಂಗಳೂರು:ಅಬಕಾರಿ, ಉಪನ್ಯಾಸಕ ಸೇರಿದಂತೆ ಹಲವಾರು ಸರ್ಕಾರಿ ಇಲಾಖೆಯುಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಉದ್ಯೋಗ ಆಕಾಂಕ್ಷಿಗಳಿಂದ ಕೋಟ್ಯಂತರ ರೂಪಾಯಿ ವಂಚಿಸಿದ್ದ ದಾವಣಗೆರೆ ಮೂಲದ ಅರುಣ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪಿಎಸ್‌ಸಿ ಹೆಸರಲ್ಲಿ ಸರ್ಕಾರಿ ಉದ್ಯೋಗಗಳು ಡೀಲ್ ಆಗುತ್ತಿವೆ, ತಾನು ಕೆಪಿಎಸ್ಐ ಮೆಂಬರ್ ಎಂದೇಳಿ ಉದ್ಯೋಗ ಕೊಡಿಸುವುದಾಗಿ ಅಮಾಯಕರನ್ನು ನಂಬಿಸಿ ಲಕ್ಷಾಂತರ ರೂಪಾಯಿ ಲೂಟಿ ಮಾಡುತ್ತಿದ್ದ ದಾವಣಗೆರೆಯ ಅರುಣ್ ಕುಮಾರ್‌ನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅರುಣ್ ಕುಮಾರ್ ಮನೆ ಬಾಗಿಲಿಗೆ ನೇಮಕಾತಿ ಪತ್ರ ಬರುವಂತೆ ಮಾಡುತ್ತೀನಿ ಎಂದೇಳಿ ಲಕ್ಷಾಂತರ ಹಣವನ್ನು ಸ್ವೀರಿಸಿದ್ದಾನೆ. ತಾನು ಕೆಪಿಎಸ್ಸಿ ಸದಸ್ಯ ಎಂದು ಹೇಳಿ ಹಲವರಿಗೆ ಹೇಳಿ ಅಬಕಾರಿ, ಉಪನ್ಯಾಶಕ ಹುದ್ದೆಗಳನ್ನು ಕೊಡಿಸುವುದಾಗಿ ಸಾಕಷ್ಟು ಜನರಿಗೆ ಮೋಸ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ.
1.67 ಕೋಟಿ ರೂ ವಂಚನೆ
ವಂಚಕ ಅರುಣ್ ಕುಮಾರ್ ಸರ್ಕಾರಿ ಉದ್ಯೋಗದ ಆಸೆ ಇಟ್ಟುಕೊಂಡಿದ್ದ ಯುವಕರನ್ನ ಮೊದಲು ಪರಿಚಯ ಮಾಡಿಕೊಳ್ಳುತ್ತಿದ್ದ. ನಂತರ ನನಗೆ ಎಲ್ಲಾ ರೀತಿಯ ಲಿಂಕ್ ಇದೆ. ಅಬಕಾರಿ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಹುದ್ದೆ ಕೊಡಿಸುತ್ತೇನೆ ಎಂದು ಯುವಕರಿಗೆ ಅಮಿಷವೊಡ್ಡಿ, ಹುದ್ದೆ ಕೊಡಿಸಲು 70 ಲಕ್ಷ ಖರ್ಚಾಗುತ್ತೆ ಎಂದು ಮುಂಚೆಯೇ ಆಕಾಂಕ್ಷಿಗಳಿಗೆ ತಿಳಿಸುತ್ತಿದ್ದನೆಂದು ತಿಳಿದುಬಂದಿದೆ.