ಕರ್ನಾಟಕ

karnataka

ETV Bharat / state

ಫೇಸ್​ಬುಕ್​ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ಆರೋಪಿ ಅಂದರ್! - ಸಿಸಿಬಿ ಪೊಲೀಸರು

ಬಸವೇಶ್ವರನಗರದ ಸೈಬರ್ ಅಪರಾಧ ಠಾಣೆಗೆ ಬಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.

ccb
ccb

By

Published : Jul 24, 2020, 9:30 AM IST

ಬೆಂಗಳೂರು:ಮಕ್ಕಳ ಅಶ್ಲೀಲ ವಿಡಿಯೋ ಚಿತ್ರಗಳನ್ನು ಫೇಸ್​ಬುಕ್​ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಆರೋಪಿಯ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ರೌಡಿ ಶೀಟರ್ ಮಂಜು‌ನಾಥ ಅಲಿಯಾಸ್ ಕೋಳಿ ಮಂಜು ಬಂಧಿತ ಆರೋಪಿ.

ಈ ಆರೋಪಿ ಮಕ್ಕಳ ಅಶ್ಲೀಲ ವಿಡಿಯೋ ಚಿತ್ರಗಳನ್ನು ಫೇಸ್​ಬುಕ್​ ಹಾಗೂ ಇತರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​​​​ ಮಾಡುತ್ತಿದ್ದ. ಈ ದೂರು ಬಸವೇಶ್ವರ ನಗರದ ಸೈಬರ್ ಅಪರಾಧ ಠಾಣೆಗೆ ಬಂದ ಕಾರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.

ಈತನ ವಿರುದ್ದ ಕಳ್ಳತನ, ದರೋಡೆ, ಸೇರಿದಂತೆ ಒಟ್ಟು 8 ಪ್ರಕರಣ ದಾಖಲಾಗಿದೆ. ಇನ್ನು ಈತ ವಿಕೃತ ಮನಸ್ಸಿನಿಂದ ಮಕ್ಕಳ ಅಶ್ಲೀಲ ವಿಡಿಯೋ ಚಿತ್ರಗಳನ್ನ ಅಪ್ಲೋಡ್ ಮಾಡಿರುವ ವಿಚಾರ ಬಯಲಾಗಿದೆ. ಎಲ್ಲಿಂದ ಮಕ್ಕಳ ವಿಡಿಯೋ ಸೆರೆ ಹಿಡಿಯುತ್ತಿದ್ದ ಅನ್ನೋದರ ಬಗ್ಗೆ ತನಿಖೆ ‌ಮುಂದುವರೆದಿದೆ.

ಸದ್ಯ ಆರೋಪಿ ವಿರುದ್ದ 67(ಬಿ) ಐಟಿ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿ ಪ್ರಕರಣ ಗಂಭೀರವಾಗಿ ತೆಗೆದುಕೊಂಡು ಹೆಚ್ಚಿನ ತನಿಖೆಯನ್ನ ಹೆಚ್ಚುವರಿ ಆಯುಕ್ತ ಸಂದೀಪ್ ನೇತೃತ್ವದಲ್ಲಿ ಡಿಸಿಪಿ ಕುಲ್ದೀಪ್ ನಡೆಸುತ್ತಿದ್ದಾರೆ.

ABOUT THE AUTHOR

...view details