ಕರ್ನಾಟಕ

karnataka

ETV Bharat / state

ಕಾಳಸಂತೆಯಲ್ಲಿ ಬ್ಯ್ಲಾಕ್ ಫಂಗಸ್‌ ಔಷಧಿ ಮಾರುತ್ತಿದ್ದ ಆರೋಪಿ ಬಂಧನ

ಕಾಳಸಂತೆಯಲ್ಲಿ ಬ್ಲ್ಯಾಕ್ ಫಂಗಸ್ ಔಷಧಿ ಮಾರಾಟಕ್ಕೆ ಯತ್ನಿಸಿದ ಆರೋಪಿ ರಾಮ್ ಮೋಹನ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪುರಂ ಕುಂದಲಹಳ್ಳಿ ಐಟಿಐ ಗೇಟ್ ಬಳಿ ಔಷಧಿ ಮಾರುತ್ತಿದ್ದ ಆರೋಪಿಯನ್ನ ಔಷಧಿ ಸಮೇತ ಖಾಕಿ ಪಡೆ ಬಂಧಿಸಿದೆ

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪ್ರತಿಕ್ರಿಯೆ
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪ್ರತಿಕ್ರಿಯೆ

By

Published : Jun 12, 2021, 4:16 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮತ್ತು ಬ್ಲ್ಯಾಕ್ ಫಂಗಸ್ ಸೋಂಕಿತರು ಔಷಧಿ ಸಿಗದೆ ಪರದಾಡುತ್ತಿದ್ದಾರೆ‌‌. ಒಂದೊಂದು ಡೋಸ್‌ಗಾಗಿ ದಿನವೆಲ್ಲ ಅಲೆದಾಡುತ್ತಿದ್ದಾರೆ. ಇಂಥ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಿಡಿಗೇಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಾಳಸಂತೆಯಲ್ಲಿ ಬ್ಲ್ಯಾಕ್ ಫಂಗಸ್ ಔಷಧಿ ಮಾರಾಟಕ್ಕೆ ಯತ್ನಿಸಿದ ಆರೋಪಿ ರಾಮ್ ಮೋಹನ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪುರಂ ಕುಂದಲಹಳ್ಳಿ ಐಟಿಐ ಗೇಟ್ ಬಳಿ ಔಷಧಿ ಮಾರುತ್ತಿದ್ದ ಈತನನ್ನು ಔಷಧಿ ಸಮೇತ ಖಾಕಿ ಪಡೆ ಬಂಧಿಸಿದೆ. ಬ್ಲ್ಯಾಕ್ ಫಂಗಸ್​​‌ನ 80 ಮಾತ್ರೆ ಮತ್ತು 17 ಇಂಜೆಕ್ಷನ್​​ಗಳನ್ನು ವಶಕ್ಕೆ ಪಡೆಯಲಾಗಿದೆ.‌ ಇದರ ಅಂದಾಜು ಬೆಲೆ ನಾಲ್ಕೂವರೆ ಲಕ್ಷ ರೂ‌ಪಾಯಿ ಎನ್ನಲಾಗಿದೆ. ಕೆ.ಆರ್.ಪುರಂ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆದಿದೆ.

ABOUT THE AUTHOR

...view details