ಬೆಂಗಳೂರು: ತನ್ನ ಪತ್ನಿಗೆ ಪರಪುರುಷನ ಜೊತೆ ಸಂಪರ್ಕವಿದೆ ಎಂದು ಭಾವಿಸಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ ಗಂಡನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಅಶೋಕ್ ಬಂಧಿತ ಆರೋಪಿಯಾಗಿದ್ದು, ವನಜಾಕ್ಷಿ ಕೊಲೆಯಾಗಿದ್ದರು.
ವನಜಾಕ್ಷಿ ಮೂಲತಃ ಮಾಗಡಿಯವರಾಗಿದ್ದು, 13 ವರ್ಷಗಳ ಹಿಂದೆ ಅಶೋಕ್ನನ್ನು ಮದುವೆಯಾಗಿದ್ದರು. ದಂಪತಿಗೆ ಮೂರು ಮಕ್ಕಳಿದ್ದು, ಕುಟುಂಬಸಮೇತ ಕಾವೇರಿಪುರದಲ್ಲಿ ವಾಸವಾಗಿದ್ದರು. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮಕ್ಕಳ ಸಮೇತ ವನಜಾಕ್ಷಿ ಊರಿಗೆ ತೆರಳಿದ್ದರು. ಇತ್ತ ಪತಿಗೆ ಪತ್ನಿ ಮೇಲೆ ಅನುಮಾನ ಹೆಚ್ಚಾಗಿತ್ತಂತೆ.
ಇದನ್ನೂ ಓದಿ:ಜ್ವರದಿಂದ ಬಳಲುತ್ತಿದೆ ಇಡೀ ಊರು: ಸರ್ಕಾರಿ ಆಸ್ಪತ್ರೆಗೆ ಹೋದ್ರೆ ಖಾಸಗಿ ಆಸ್ಪತ್ರೆಗೆ ಕಳಿಸ್ತಾರಂತೆ!
ಪತ್ನಿ ಬೇರೆಯವರ ಜೊತೆಗೆ ಪದೇ ಪದೇ ಫೋನ್ನಲ್ಲಿ ಮಾತನಾಡುತ್ತಾಳೆ, ಯಾರ ಜೊತೆಗೋ ಸಂಬಂಧವಿದೆ ಎಂದು ಅನುಮಾನಗೊಂಡು ಆಕೆ ಮನೆಗೆ ಮರಳಿ ಬಂದಾಗ ಕಳೆದ ಏಪ್ರಿಲ್ 17ರಂದು ಗಲಾಟೆ ಮಾಡಿ ಹೆಂಡತಿ ಮಲಗಿದ್ದಾಗ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಯಾರಿಗೂ ಗೊತ್ತಾಗದ ಹಾಗೆ ಮನೆ ಬೀಗ ಹಾಕಿಕೊಂಡು ಪರಾರಿ ಆಗಿದ್ದಾನೆ. ಮೂರು ದಿನಗಳ ನಂತ್ರ ಘಟನೆ ಬೆಳಕಿಗೆ ಬಂದಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಅಶೋಕ್ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.