ಬೆಂಗಳೂರು :ಡೇಟಿಂಗ್ ಆ್ಯಪ್ ಮೂಲಕ ಮಹಿಳೆಯರನ್ನು ಸಂಪರ್ಕ ಮಾಡಿ ಮಹಿಳೆಯರ ನಂಬರ್ ಪಡೆದು ನಂತರ ಅವರ ಮನೆಗೆ ತೆರಳುತ್ತಿದ್ದ ಈ ಕಿರಾತಕ ಅವರ ಮನವೊಲಿಸಿ ವಿವಸ್ತ್ರಗೊಳಿಸಿದ ಫೋಟೋ ತೆಗೆದು ಬ್ಲಾಕ್ಮೇಲ್ ಮಾಡುತ್ತಿದ್ದ. ಘಟನೆ ಸಂಬಂಧ ಆರೋಪಿಯನ್ನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಫೆ.1 ರಂದು ಛತ್ತೀಸ್‌ಗಡ್ ಮೂಲದ 33 ವರ್ಷದ ಸುಶಾಂತ್ ಜೈನ್ ಎಂಬ ವ್ಯಕ್ತಿ ಮಹಿಳೆಯೋರ್ವಳಿಗೆ ಕಾಲ್ ಮಾಡಿ ಆಕೆಯ ಮನೆಗೆ ಹೋಗಿದ್ದಾನೆ. ಅಷ್ಟೇ ಅಲ್ಲ, ಆಕೆಯನ್ನು ಪುಸಲಾಯಿಸಿ ಬಟ್ಟೆ ಬಿಚ್ಚಿಸಿ ಖಾಸಗಿ ಫೋಟೋಗಳನ್ನೂ ಶೂಟ್ ಮಾಡಿಕೊಂಡು ತದನಂತರ ಹಣ ನೀಡುವಂತೆ ಬೆದರಿಕೆ ಹಾಕಿದ್ದಾನೆ.