ಬೆಂಗಳೂರು :ಕೆಲಸದ ಆಮಿಷವೊಡ್ಡಿ ಕರೆತಂದು ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮೂವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಮಂಡ್ಯ ಮೂಲದ ಸುನಿಲ್ ಬಂಧಿತ ಆರೋಪಿ. ಈತ ಮದುವೆ ಕಾರ್ಯಕ್ರಮಗಳಲ್ಲಿ ಸರ್ವ್ ಕೆಲಸಕ್ಕೆಂದು ಮೂವರು ಯುವತಿಯರನ್ನು ಕರೆಸಿಕೊಂಡು,ಪಬ್ ಬಾರ್ಗಳಲ್ಲಿ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಯುವತಿಯರು ನಿರಾಕರಿಸಿದಾಗ, ನಿಮಗಾಗಿ ವ್ಯಯಿಸಿದ ಹಣ ಕೊಡಿ ಎಂದು ಅಪಾರ್ಟ್ಮೆಂಟ್ವೊಂದರಲ್ಲಿ ಬಂಧನದಲ್ಲಿರಿಸಿದ್ದ ಎಂದು ಆರೋಪಿಸಲಾಗಿದೆ.