ಕರ್ನಾಟಕ

karnataka

ETV Bharat / state

ರಾಜ್ಯದ ಕಂದಮ್ಮಗಳನ್ನು ಕಾಡುತ್ತಿದೆ ಅಪೌಷ್ಟಿಕತೆ.. - Malnutrition among children banglore news

ರಾಜ್ಯದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

banglore
ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ

By

Published : Jan 13, 2020, 9:25 PM IST

ಬೆಂಗಳೂರು: ರಾಜ್ಯದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ

ಮಾಧ್ಯಮದವರೊಂದಿ ಮಾತನಾಡಿದ ಅವರು, ರಾಜ್ಯದ ಆರೋಗ್ಯ ಇಲಾಖೆಯು 8 ಲಕ್ಷಕ್ಕೂ ಹೆಚ್ಚು ಮಕ್ಕಳ ತೂಕ ಮಾಡಿದಾಗ ತೀವ್ರ ಅಪೌಷ್ಟಿಕತೆಯಿಂದ ಮಕ್ಕಳು ನರಳುತ್ತಿರುವುದು ತಿಳಿದು ಬಂದಿದೆ.‌ ಶೇಕಡ. 38.7 ರಷ್ಟು ಮಕ್ಕಳು ನರಳುತ್ತಿದ್ದು, ನವೆಂಬರ್ 2019ರಲ್ಲಿ 30 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದಾಗ ಸುಮಾರು 2,414 ಮಕ್ಕಳು ತೀವ್ರ ಅಪೌಷ್ಟಿಕತೆ ಯಿಂದ ಬಳಲುತ್ತಿದ್ದಾರೆ ಎಂದರು. ಇನ್ನು ಆರೋಗ್ಯ ಇಲಾಖೆಯು ಗುರುತಿಸಿದ ತೀವ್ರ ಅಪೌಷ್ಟಿಕತೆಯಲ್ಲಿ ಬೆಳಗಾವಿಯಲ್ಲಿ 453, ಚಿತ್ರದುರ್ಗ 114, ಧಾರವಾಡ 139, ಕಲಬುರಗಿ 219, ಉತ್ತರ ಕನ್ನಡ 224, ಯಾದಗಿರಿಯಲ್ಲಿ 162 ಮಕ್ಕಳು ಅತೀ ಹೆಚ್ಚು ಬಳಲುತ್ತಿರುವುದು ಕಂಡು ಬಂದಿದೆ.

ಇನ್ನು ಪೌಷ್ಟಿಕ ಪುನರ್ವಸತಿ ಕೇಂದ್ರಗಳಲ್ಲಿ 1051 ಮಕ್ಕಳನ್ನು ದಾಖಲಿಸಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ 7, ಬೀದರ್ 3, ದಕ್ಷಿಣ ಕನ್ನಡದಲ್ಲಿ 4 ಮಕ್ಕಳು ಮಾತ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇನ್ನು ಸರ್ಕಾರದಿಂದ ಮಾತೃಶ್ರೀ ಅಂತಹ ಹಲವು ಕಾರ್ಯಕ್ರಮಗಳು ಇದ್ದರು ಸಹ ಅಪೌಷ್ಟಿಕತೆ ಕಡಿಮೆ ಆಗಿಲ್ಲ ಎಂದು ತಿಳಿಸಿದರು.

ABOUT THE AUTHOR

...view details