ಕರ್ನಾಟಕ

karnataka

ETV Bharat / state

ಕರ್ನಾಟಕ ಬಂದ್: ಮುಂಜಾಗ್ರತಾ ಕ್ರಮ ಕೈಗೊಂಡು ಮಾಲ್​ಗಳು ಓಪನ್ - ಬೆಂಗಳೂರು

ರೈತಪರ ಸಂಘಟನೆಗಳು ಹಾಗೂ ದಲಿತಪರ ಸಂಘಗಳು ಇಂದು ರಾಜ್ಯ ಬಂದ್​ಗೆ ಕರೆ ನೀಡಿದ್ದು, ನಗರದ ಮಳಿಗೆಗಳು ಬಂದ್​​ಗೆ ಬೆಂಬಲ ಸೂಚಿಸದೆ ಅಂಗಡಿ ಮುಂಗಟ್ಟು ತೆರೆಯಲು ಪ್ರಾರಂಭಿಸಿವೆ.

Bangalore
Bangalore

By

Published : Sep 28, 2020, 12:05 PM IST

ಬೆಂಗಳೂರು: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮಾಲ್​ಗಳು ಎಂದಿನಂತೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಲ್ಲು ತೂರಾಟ ಸಂದರ್ಭದಲ್ಲಿ ಯಾವುದೇ ಹಾನಿ ಆಗಬಾರದು ಎಂದು ಪರದೆ ಹಾಕಿ ಯಥಾಸ್ಥಿತಿ ಮಳಿಗೆಗಳನ್ನು ತೆರೆಯಲಾಗುತ್ತಿದೆ.

ಮುಂಜಾಗ್ರತಾ ಕ್ರಮ ಕೈಗೊಂಡು ತೆರೆದ ಮಾಲ್​ಗಳು

ರೈತಪರ ಸಂಘಟನೆಗಳು ಹಾಗೂ ದಲಿತಪರ ಸಂಘಗಳು ಇಂದು ರಾಜ್ಯ ಬಂದ್​ಗೆ ಕರೆ ನೀಡಿದ್ದು, ನಗರದ ಮಳಿಗೆಗಳು ಬಂದ್​ಗೆ ಬೆಂಬಲ ಸೂಚಿಸದೆ ಅಂಗಡಿ ಮುಂಗಟ್ಟು ತೆರೆಯಲು ಪ್ರಾರಂಭಿಸಿವೆ. ಸಾಮಾನ್ಯವಾಗಿ ಬೆಳಗ್ಗೆ 10 ಗಂಟೆಗೆ ತೆರೆಯುವ ಅಂಗಡಿಗಳು ಇಂದು ಪರಿಸ್ಥಿತಿ ನೋಡಿ 11ಕ್ಕೆ ತೆರೆದಿವೆ.

ಲಾಕ್​ಡೌನ್​ನಿಂದ ಆದ ಆರ್ಥಿಕ ಹೊರೆಯಿಂದ ಅಂಗಡಿ ಮಳಿಗೆಗಳು ಯಾವುದೇ ಕಾರಣಕ್ಕೂ ಬಂದ್ ಕಾರಣ ಕಾರ್ಯ ಸ್ಥಗಿತಗೊಳಿಸಲ್ಲ ಎಂದು ನಿರ್ಧಾರ ಮಾಡಿದ್ದವು. ಈ ಕಾರಣ ಒಂದು ಗಂಟೆ ವಿಳಂಬವಾಗಿ ಪೊಲೀಸ್ ಭದ್ರತೆ ಇರುವ ಕಾರಣ ಎಂದಿನಂತೆ ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ. ಮಾರುಕಟ್ಟೆಯಲ್ಲಿ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಲಾಕ್​ಡೌನ್​ನಿಂದ ಆದ ಆರ್ಥಿಕ ಸಂಕಷ್ಟದಿಂದ ಇನ್ನೂ ಚೇತರಿಕೆ ಕಾಣದ ಮಾಲೀಕರು ಈ ನಿರ್ಧಾರಕ್ಕೆ ಬಂದಿದ್ದಾರೆ.

ABOUT THE AUTHOR

...view details