ಬೆಂಗಳೂರು: 33 ಜನರಿಗೆ 2022ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ನೀಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮುಖ್ಯವಾಗಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ.
ಇನ್ನು, ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ವಿಶೇಷ ಪ್ರಶಸ್ತಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹಾಗೂ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಆಯ್ಕೆಯಾಗಿದ್ದಾರೆ. ಡಿಸೆಂಬರ್ 31ರಂದು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2022ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ನೀಡುವ ವಾರ್ಷಿಕ ಪ್ರಶಸ್ತಿಗೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಪ್ರೆಸ್ ಕ್ಲಬ್ ವಾರ್ಷಿಕ ವಿಶೇಷ ಪುರಸ್ಕೃತರಾಗಿ ಬಸವರಾಜು, ಹನುಮೇಶ್ ಯಾವಗಲ್, ಹೆಚ್.ಎಸ್.ಬಲರಾಂ, ಅಗ್ರಹಾರ ಕೃಷ್ಣಮೂರ್ತಿ, ಗಂಗಾಧರ, ಮೊದಲಿಯಾರ್, ಚೆನ್ನನಾಗರಾಜ್ ಎಂ., ಶ್ರೀಧರ ಬಿ.ಎನ್, ವಿನಯ್.ಎಂ, ಗೌತಮ್ ಮಾಚಯ್ಯ ಎಂ, ರಾಜಶೇಖರ್, ಎಸ್.ಹೆಚ್. ಮೂರ್ತಿ, ಸಂಗಮ್ ದೇವ್ ಐ.ಹೆಚ್, ಮುನೀರ್ ಅಹಮದ್ ಅಬದ್, ಕೆ.ವಿ. ಪರಮೇಶ್ , ಸಿ.ಎಸ್. ಬೋಪಯ್ಯ, ಶ್ಯಾಂ ಬೋಜಕ್, ಭಾಗ್ಯ ಪ್ರಕಾಶ್ .ಕೆ, ಅನಿಲ್ ವಿ. ಗೆಜ್ಜೆ, ಗಾಯತ್ರಿ ನಿವಾಸ್, ಶಿವಣ್ಣ, ಶೋಭಾ ಎಂ.ಸಿ, ದಿವಾಕರ್ .ಸಿ, ನಾಗಭೂಷಣ್ ಮೈ.ಎಂ, ವಿಲಾಸ್ ನಂದೂಡಕರ್, ಇ ನಾಗರಾಜು, ಪಿ. ರಾಜೇಂದ್ರ, ಶಿವಾನಂದ ತಗಡೂರು ಟಿ.ವಿ., ಶಿವಪ್ರಕಾಶ್ .ಎಸ್, ಓಂಕಾರ ಕಾಕಡೆ, ಜಯ ಪ್ರಕಾಶ್ ಆರ್. ನರಸಿಂಹ ರಾವ್, ರಾಘವೇಂದ್ರ ಕೆ. (ತೋಗರ್ಸಿ), ಗಿರಿಪ್ರಕಾಶ್ ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ :ನ್ಯೂಸ್ ಪೇಪರ್ ಆಫ್ ಕರ್ನಾಟಕ ವತಿಯಿಂದ 67 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ