ಕರ್ನಾಟಕ

karnataka

ETV Bharat / state

ಒಟ್ಟಾಗಿ ನಿರ್ಣಯ ಕೈಗೊಳ್ಳಲು ಬಿಎಸ್‌ವೈಗೆ ಸಾಧ್ಯವಾಗ್ತಿಲ್ಲ.. ಮಲ್ಲಿಕಾರ್ಜುನ್ ಖರ್ಗೆ - Cabinet minister

ಬಿಜೆಪಿ ಸಚಿವ ಸಂಪುಟ ಮತ್ತು ಬರ ಪರಿಹಾರ ನಿಧಿ ಬಿಡುಗಡೆಯ ವಿಳಂಬದ ಬಗ್ಗೆ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ. ಕೇಂದ್ರದಿಂದ ಬರ ಪರಿಹಾರ ನಿಧಿ ಬಿಡುಗಡೆಯಾಗಿದೆ. ಆದರೆ, ನೆರೆ ಪರಿಹಾರ ನಿಧಿ ಯಾವಾಗ ಬಿಡುಗಡೆಯಾಗುತ್ತೆ ಅಂತಾ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನ ಪಶ್ನೆ ಮಾಡಿದ್ದಾರೆ.

ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ

By

Published : Aug 27, 2019, 1:59 PM IST

ಬೆಂಗಳೂರು :ಒಗ್ಗಟ್ಟಾಗಿ ನಿರ್ಣಯ ತೆಗೆದುಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಾಧ್ಯ ಆಗ್ತಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ಪಟ್ಟಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ಮಂತ್ರಿ ಮಂಡಲ ರಚನೆ ಮಾಡಲು 25ದಿನ ತೆಗೆದುಕೊಂಡಿದೆ. ಅದಾದಮೇಲೆ ಖಾತೆ ಹಂಚಿಕೆಗೆ ನಾಲ್ಕೈದು ದಿನ ಆಯ್ತು. ರಾಜ್ಯದಲ್ಲಿ ಒಂದು ಕಡೆ ಪ್ರವಾಹ ಪೀಡಿತರಾಗಿ ಸಾಕಷ್ಟು ಜನ ತೊಂದರೆಗೀಡಾಗಿದಾರೆ. ತೊಂದರೆ ಕೇಳುವರು, ನೋಡುವವರು ಯಾರೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಳೆಯಾಗಿಲ್ಲ. ಬರಗಾಲದ ವಾತಾವರಣವಿದೆ. ಸರ್ಕಾರದವರು ತ್ವರಿತವಾದ ಕೆಲಸ ಮಾಡೋದು ಬಿಟ್ಟು ಕಚ್ಚಾಡಿಕೊಂಡು ಕೂತಿದ್ದಾರೆ. ನಾನು ಮೇಲೆ, ನೀನು ಮೇಲೆ ಅಂತಿದ್ದಾರೆ. ಎರಡು ತಿಂಗಳಿಂದ ರಾಜ್ಯದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ರೈತರ ಹೆಸರೇಳೋ ಬಿಜೆಪಿಯವರು ರೈತರ ಪರ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ..

ವಿಳಂಬ ನೀತಿ

ಕಾಂಗ್ರೆಸ್‌ನವರು ಮಾತು ಮಾತಿಗೆ ಹೈಕಮಾಂಡ್ ಅಂತಾರೆ. ಮಾತು ಮಾತಿಗೆ ದಿಲ್ಲಿಗೆ ಹೋಗ್ತಾರೆ ಅಂತಾ ನಮ್ಮನ್ನು ಟೀಕಿಸುತ್ತಿದ್ರು. ಆದ್ರೀಗ ಏನು ಮಾಡ್ತಿದ್ದಾರೆ ? ಎಂದು ಬಿಜೆಪಿಗರ ವಿರುದ್ದ ಕಿಡಿಕಾರಿದರು.

ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಿನ ಮಾತಿನ ಕಲಹದ ಬಗ್ಗೆ ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಲು ಖರ್ಗೆ ನಿರಾಕರಿಸಿದರು.ನಾನು ಮೂರನೆ ವ್ಯಕ್ತಿ. ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರವರ ಅಭಿಪ್ರಾಯ, ಅವರಿಗೇ ಬಿಟ್ಟಿದ್ದು ಎಂದು ಜಾಣ ಉತ್ತರ ನೀಡಿ ನುಣುಚಿಕೊಂಡರು.

ಪ್ರತಿಪಕ್ಷ ನಾಯಕ ವಿಚಾರ

ಪ್ರತಿಪಕ್ಷ ನಾಯಕನ ಸ್ಥಾನ ನೇಮಕ ವಿಚಾರ ಮಾತನಾಡಿ, ಆದಷ್ಟು ಬೇಗ ನೇಮಕ ಮಾಡ್ತಾರೆ. ಈ ಬಗ್ಗೆ ಚರ್ಚೆಯಾಗ್ತಿದೆ ಎಂದರು. ಆರ್‌ಬಿಐಗೆ ಯಾವುದೋ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದವರನ್ನು ಗೌವರ್ನರ್ ಮಾಡಿ ಕೂರಿಸಲಾಗಿದೆ. ದೇಶದ ಆರ್ಥಿಕ ಸ್ಥಿತಿ ದಿವಾಳಿಯತ್ತ ಸಾಗ್ತಿದೆ. ಆದ್ರೂ ಮೋದಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಾವು ಏನೇ ಮಾಡಿದ್ರು ನಡೆಯುತ್ತೆ ಎನ್ನುವ ಮನೋಭಾವನೆ ಮೋದಿಗೆ ಇದ್ದಿರಬಹುದೇನೋ? ಕಳೆದ ಬಾರಿ ಬರ ಪರಿಹಾರದ ದುಡ್ಡನ್ನ ಈಗ ರಾಜ್ಯಕ್ಕೆ ಬಿಡುಗಡೆ ಮಾಡಿದ್ದಾರೆ. ನೆರೆ ಹಣ ಯಾವಾಗ ಬಿಡುಗಡೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ABOUT THE AUTHOR

...view details