ಬೆಂಗಳೂರು :ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಇದು ಬರೀ ಸುಳ್ಳು ಸುದ್ದಿ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಡಾ.ಬಾಬು ಜಗಜೀವನರಾಂ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.
ಬಾಂಗ್ಲಾ ಹೋರಾಟದಲ್ಲೇ ಅವರು ಭಾಗವಹಿಸಿರಲಿಲ್ಲ. ಬರೀ ಸುಳ್ಳು ಹೇಳಿಕೊಂಡೇ ಹೊರಟಿದ್ದಾರೆ. ಪಾಪ ಅವರು ಇನ್ನೊಂದು ಹೇಳಬೇಕಿತ್ತು. ದೇಶದ ಸ್ವಾತಂತ್ರ್ಯದಲ್ಲಿ ಪಾಲ್ಗೊಂಡಿದ್ದೆ ಅಂತ. ಆದರೆ, ಹಾಗೇ ಹೇಳಲಿಲ್ಲವಷ್ಟೇ.. ಜಾತಿ ಜಾತಿಗಳ ನಡುವೆ ಧ್ವೇಷ ಮೂಡಿಸುತ್ತಿದ್ದಾರೆ. ಧರ್ಮ ಮುಂದಿಟ್ಟುಕೊಂಡೇ ಅಧಿಕಾರಕ್ಕೆ ಬಂದವರು. ದೇಶದ ಅಭಿವೃದ್ಧಿಯ ಬಗ್ಗೆ ಎಲ್ಲೂ ಮಾತನಾಡಲಿಲ್ಲ. ದೇಶವನ್ನ ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ ಎಂದರು.
ಕೇರಳ, ಬಸವಕಲ್ಯಾಣದಲ್ಲಿ ಆರ್ಎಸ್ಎಸ್ ಐಡಿಯಾಲಜಿ ಮಾಡ್ತಿದ್ದಾರೆ. ಇದೊಂದು ವಿಷ ವಿದ್ದಂತೆ. ವಿಷವನ್ನು ಎಲ್ಲಾದ್ರೂ ಟೇಸ್ಟ್ ಮಾಡೋಕೆ ಸಾಧ್ಯವಾಗುತ್ತಾ? ಒಂದು ತೊಟ್ಟು ಕುಡಿದರೆ ಸಾಕು ಸಾಯುತ್ತಾರೆ. ಹೋಗಲಿ ಅಂತ ಒಮ್ಮೆ ಅವಕಾಶ ಕೊಟ್ಟರೆ ಮುಗೀತು. ಎಲ್ಲವೂ ಮುಗಿದಂತೆಯೇ ಸರಿ. ಸಂವಿಧಾನವನ್ನು ಇವರು ಒಪ್ಪಲ್ಲ.