ಬೆಂಗಳೂರು:ಮೀಸಲಾತಿ ವಿಚಾರದಲ್ಲಿ ರಾಜ್ಯವಷ್ಟೇ ಅಲ್ಲ, ರಾಷ್ಟ್ರ ಮಟ್ಟದಲ್ಲಿ ತಲ್ಲಣಗೊಳ್ಳುವಂತಹ ತೀರ್ಪನ್ನು ಸುಪ್ರೀಂಕೋರ್ಟ್ ಕೊಟ್ಟಿದೆ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮೀಸಲಾತಿಗೂ ತಿದ್ದುಪಡಿ ತಂದು ಆಯಾ ರಾಜ್ಯಗಳಲ್ಲಿ ಸರ್ಕಾರದ ಶಕ್ತಿ ಬಳಸಿ ಅದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದರು. ಎಲ್ಲಾ ರಾಜ್ಯದಲ್ಲಿ ಮೀಸಲಾತಿ ತೆಗೆಯಬೇಕು, ಸಂವಿಧಾನ ಬದಲಿಸಬೇಕೆನ್ನುವುದು ಬಿಜೆಪಿ ಸರ್ಕಾರದ ಹಂಬಲವಾಗಿದೆ ಎಂದು ಇದೇ ವೇಳೆ ಅವರು ಆರೋಪಿಸಿದರು.