ಕರ್ನಾಟಕ

karnataka

ETV Bharat / state

23 ಮಲ್ಲೇಶ್ವರ ಸರ್ಕಾರಿ ಶಾಲೆಗಳು ಸ್ಮಾರ್ಟ್​ ಸ್ಕೂಲ್​ಗಳಾಗಿ ಪರಿವರ್ತನೆ: ಅಶ್ವತ್ಥ ನಾರಾಯಣ್

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ 23 ಸರ್ಕಾರಿ ಶಾಲೆಗಳಿಗೆ ಇಂಡೋಮಿಮ್ ಕಂಪನಿಯಿಂದ 70 ಸ್ಮಾರ್ಟ್ ಟಿವಿ ವಿತರಣೆ.

70 Smart TV by Indo Mim Company Delivery to school
ಇಂಡೋಮಿಮ್ ಕಂಪನಿಯಿಂದ 70 ಸ್ಮಾರ್ಟ್ ಟಿವಿ ವಿತರಣೆ

By

Published : Mar 9, 2023, 4:53 PM IST

ಬೆಂಗಳೂರು:ಟ್ಯಾಬ್ ಮತ್ತು ಸ್ಮಾರ್ಟ್ ಬೋರ್ಡ್ ವ್ಯವಸ್ಥೆ ಕಲ್ಪಿಸುವುದರಿಂದ ಮಕ್ಕಳಿಗೆ ಆಧುನಿಕ ವೈಜ್ಞಾನಿಕ ಕಲಿಕೆ ಸಾಧ್ಯವಾಗಿದೆ. ಈ ಮೂಲಕ ಸರ್ಕಾರಿ ಶಾಲೆಗಳೂ ಸ್ಮಾರ್ಟ್ ಆಗಿ ಪರಿವರ್ತನೆ ಆಗುತ್ತಿವೆ. ಇದಕ್ಕೆ ಪೂರಕವಾಗಿ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರುವ 23 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ನೆರವಿಗೆ ಇಂಡೋಮಿಮ್ ಕಂಪನಿಯಿಂದ 70 ಸ್ಮಾರ್ಟ್ ಟಿವಿಗಳನ್ನು ವಿತರಿಸಿದ್ದು, ಕ್ಷೇತ್ರದ ಸರ್ಕಾರಿ ಶಾಲೆಗಳು ಸ್ಮಾರ್ಟ್ ಶಾಲೆಗಳಾಗಿ ಪರಿವರ್ತನೆಯಾಗಲಿವೆ ಎಂದು ಉನ್ನತ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದರು.

ನಗರದ ಮಲ್ಲೇಶ್ವರದಲ್ಲಿ ವ್ಯಾಪ್ತಿ ಮತ್ತೀಕೆರೆ ಸರ್ಕಾರಿ ಶಾಲೆಯ ಆವರಣದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಅಧ್ಯಕ್ಷತೆಯಲ್ಲಿ ಮಲ್ಲೇಶ್ವರ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ 70 ಸ್ಮಾರ್ಟ್ ಟಿವಿ ವಿತರಣೆ ಕಾರ್ಯಕ್ರಮ ನಡೆಯಿತು. ಇಂಡೋಮಿಮ್ ಕಂಪನಿಯ ಉಪಕ್ರಮದ ಭಾಗವಾಗಿ ಕಂಪನಿಯ ಅಧ್ಯಕ್ಷ ಜಯರಾಂ ಅವರು ಟ್ಯಾಬ್ ಮತ್ತು ಸ್ಮಾರ್ಟ್ ಬೋರ್ಡ್ ಸಾಮಗ್ರಿ ಸಾಧನಗಳನ್ನು ಸಚಿವರ ಮೂಲಕ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವತ್ಥನಾರಾಯಣ್, " ಇಂಡೋಮಿಮ್ ಕಂಪನಿಯ ಜಯರಾಂ ಅವರು ಈಗ ಕೊಟ್ಟಿರುವುದು ಸೇರಿದಂತೆ ಇದುವರೆಗೆ ಒಂದು ಕೋಟಿ ರೂಪಾಯಿ ಮೊತ್ತದ ಟ್ಯಾಬ್ ಮತ್ತು ಲ್ಯಾಪ್‌ಟಾಪ್ ಗಳನ್ನು ಕ್ಷೇತ್ರದ ಶಾಲೆಗಳಿಗೆ ಕೊಟ್ಟಿದ್ದಾರೆ. ಈಗ ಬಡವರ ಮಕ್ಕಳ ಸುಗಮ ಕಲಿಕೆಗೆ 50 ಇಂಚಿನ ಐವತ್ತು ಟಿ ವಿ ಗಳನ್ನು ಕೊಟ್ಟಿದ್ದಾರೆ. ಅವರ ಸೇವೆ ಸ್ಮರಣೀಯ. ಇದು ಅನುಕರಣಯೋಗ್ಯ ಸಂಗತಿ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ಈವರೆಗೆ 1,400 ಟ್ಯಾಬ್ ಮತ್ತು 23 ಸ್ಮಾರ್ಟ್ ಬೋರ್ಡ್ ಕೊಡಲಾಗಿದೆ. ಇದರಿಂದ ಆಧುನಿಕ ಮತ್ತು ವೈಜ್ಞಾನಿಕ ಕಲಿಕೆ ಸಾಧ್ಯವಾಗಿದೆ. ಈ ಮೂಲಕ ಎಲ್ಲ ಶಾಲೆಗಳೂ ಸ್ಮಾರ್ಟ್ ಆದಂತಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಕ್ಕಳು ಶಾಲೆಯಲ್ಲಿ ಓದು, ಆಟ ಮತ್ತು ಕುಣಿತ ಎಲ್ಲವನ್ನೂ ಅನುಭವಿಸಬೇಕು. ರಾಜ್ಯದ ಪದವಿ‌ ಕಾಲೇಜುಗಳಲ್ಲಿ 9,000 ಕೊಠಡಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಸಕಲ ಸೌಲಭ್ಯಗಳನ್ನು ಒದಗಿಸಲು ಸರಕಾರ ಬದ್ದವಾಗಿದೆ. ಸ್ಮಾಟ್​ ಶಾಲೆ ಆಗುವದರಿಂದ ಇನ್ನು ಹೆಚ್ಚಿನ ಶಿಕ್ಷಣ ಮಕ್ಕಳು ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಬಡ ಮಕ್ಕಳ ಶಿಕ್ಷಣಕ್ಕಾಗಿ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.

ಇಂದು ಕಲಿಕೆಯ ಜತೆಗೆ ಕೌಶಲ್ಯಾಭಿವೃದ್ಧಿಗೂ ಒತ್ತು ಕೊಡಲಾಗುತ್ತಿದೆ. ಇಂತಹ ಶೈಕ್ಷಣಿಕ ಉಪಕ್ರಮ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಯುವಜನರಿಗೆ ಉಜ್ವಲ ಭವಿಷ್ಯವನ್ನು ಕಲ್ಪಿಸಬೇಕು ಎನ್ನುವುದೇ ಸರ್ಕಾರದ ಗುರಿ ಆಗಿದೆ ಎಂದು ಸಚಿವರು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


ಇದನ್ನೂಓದಿ:ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಲ್ಲ, ಇದಕ್ಕೆ ಯಾರು ಹೊಣೆ: ಸಿಎಂ ಬೊಮ್ಮಾಯಿ

ABOUT THE AUTHOR

...view details