ಬೆಂಗಳೂರು: ಮಲ್ಲತ್ತಹಳ್ಳಿ ಕೆರೆ ನಗರದ ಬೃಹತ್ ಗಾತ್ರದ ಕೆರೆ. ಈ ಕೆರೆ ಅಭಿವೃದ್ಧಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ರೂ, ಜನರ ತೆರಿಗೆ ಹಣ ನೀರಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ ಅನ್ನೋದು ಸಾರ್ವಜನಿಕರ ಆರೋಪ.
ಮಲ್ಲತ್ತಹಳ್ಳಿ ಕೆರೆ ತುಂಬ ನಗರದ ಒಳಚರಂಡಿಯ ಕೊಳಚೆ ನೀರು ಸೇರಿಕೊಂಡಿದೆ. ಈ ಕೆರೆಯ ನಿರ್ವಹಣೆ ಬಿಡಿಎಯಿಂದ, ಬಿಬಿಎಂಪಿಗೆ ಹಸ್ತಾಂತರವಾದ ಮೇಲೂ ಕೆರೆ ಸೂಕ್ತ ರೀತಿಯಲ್ಲಿ ನಿರ್ವಹಣೆ ಕಾಣದೆ ಸೊರಗುತ್ತಿದೆ.
ಸುಮಾರು 22 ಎಕರೆ ವಿಸ್ತೀರ್ಣದ ಬೃಹತ್ ಕೆರೆ ಇದಾಗಿದ್ದು, ಈಗಾಗಲೇ ಬಿಡಿಎ 25 ಕೋಟಿ ರುಪಾಯಿ ವೆಚ್ಚ ಮಾಡಿ ಕೆರೆ ಅಭಿವೃದ್ಧಿ ಮಾಡಿದೆ. ಆದ್ರೆ ಕೆರೆಯ ಸದ್ಯದ ದುಸ್ಥಿತಿ ನೋಡಿದ್ರೆ, ಅಭಿವೃದ್ಧಿಗೆ ನೀಡಿದ ಹಣ ದುರುಪಯೋಗ ಆಗಿರುವುದು ಖಚಿತವಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಆರೋಪಿಸಿದ್ದಾರೆ.