ಕರ್ನಾಟಕ

karnataka

ETV Bharat / state

ಇಂದಿನ ಯಡಿಯೂರಪ್ಪ ಸುಭದ್ರ ಸರ್ಕಾರಕ್ಕೆ ನಾನೇ ಕಾರಣ: ಗುತ್ತೇದಾರ್​ - Latest News For Gutthedar

ಆನೇಕಲ್ ರಾಜ್ಯದಲ್ಲಿರುವ ಈಗಿನ ಸುಭದ್ರ ಸರ್ಕಾರಕ್ಕೆ ನಾನೇ ನೇರ ಕಾರಣ ಸಿಎಂ ಯಡಿಯೂರಪ್ಪ ನನ್ನನ್ನ ಈ ಸಂದರ್ಭದಲ್ಲಿ ನೆನೆಸಿಕೊಳ್ಳಬೇಕು, ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹೇಳಿದ್ದಾರೆ.

Malikayyya Guttedar talking About To Modi
ಇಂದಿನ ಯಡಿಯೂರಪ್ಪ ಸುಭದ್ರ ಸರ್ಕಾರಕ್ಕೆ ನಾನೇ ಕಾರಣ : ಗುತ್ತೇದಾ

By

Published : Dec 30, 2019, 11:55 AM IST

ಆನೇಕಲ್ : ರಾಜ್ಯದಲ್ಲಿರುವ ಈಗಿನ ಸುಭದ್ರ ಸರ್ಕಾರಕ್ಕೆ ನಾನೇ ನೇರ ಕಾರಣ ಸಿಎಂ ಯಡಿಯೂರಪ್ಪ ನನ್ನನ್ನ ಈ ಸಂದರ್ಭದಲ್ಲಿ ನೆನೆಸಿಕೊಳ್ಳಬೇಕು, ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹೇಳಿದ್ದಾರೆ.

ಕಾಂಗ್ರೆಸ್ ನನಗೆ ನೀಡದ್ದಕ್ಕಿಂತ ಬಿಜೆಪಿ ಸರ್ಕಾರ ನನ್ನನ್ನು ಹೆಚ್ಚು ಗುರ್ತಿಸಿದೆ ಎಂದು ಬಿಲ್ಲವ ಸಮುದಾಯದ 43ನೇ ವಾರ್ಷಿಕೋತ್ಸವದಲ್ಲಿ ರಾಜಕೀಯವಾಗಿ ಮಾತನಾಡುತ್ತ ತಮ್ಮ ಸಾಧನೆಯನ್ನು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹೇಳಿಕೊಂಡರು

ಇಂದಿನ ಯಡಿಯೂರಪ್ಪ ಸುಭದ್ರ ಸರ್ಕಾರಕ್ಕೆ ನಾನೇ ಕಾರಣ : ಗುತ್ತೇದಾ
ಬೆಂಗಳೂರು - ಬನ್ನೇರುಘಟ್ಟ ರಸ್ತೆಯ ಹುಳಿಮಾವು ಮುಖ್ಯ ರಸ್ತೆಯಲ್ಲಿನ ಬಿಲ್ಲವ ಭವನದಲ್ಲಿ ಏರ್ಪಡಿಸಿದ್ದ 43ನೇ ವಾರ್ಷಿಕೋತ್ಸವದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಗುತ್ತೇದಾರ್ ಬಿಜೆಪಿ ಪರ ಬ್ಯಾಟಿಂಗ್ ಮಾಡಿದರು. ಅಲ್ಲದೇ ಮಲ್ಲಿಕಾರ್ಜುನ ಖರ್ಗೆಯನ್ನು ಲಕ್ಷ ಬಹುಮತಗಳಿಂದ ಸೋಲಿಸಿದನ್ನು ಪ್ರಸ್ತಾಪಿಸಿದರು. ಭಾಷಣ ಪೂರ್ತಿ ಮೋದಿಯನ್ನು ಹೊಗಳಿ, ಬಿಲ್ಲವರ ಮತ ಬಿಜೆಪಿಗಿರಲಿ ಎಂಬರ್ಥದಲ್ಲಿ ಮಾತನಾಡಿ ಸೇರಿದವರಲ್ಲಿ ಮುಜಗರ ಉಂಟುಮಾಡಿದರು.

ಹಿಂದಿನ ಪ್ರಧಾನಿಗಳನ್ನ ಹೊರ ದೇಶದವರು ಆಧರಿಸಿದ್ದು, ಸಾಮಾನ್ಯವಾಗಿತ್ತು, ಮೋದಿಯನ್ನು ರೆಡ್ ಕಾರ್ಪೆಟ್ ಹಾಕಿ ಆಹ್ವಾನಿಸಿದ್ದು, ನಮ್ಮ ಹೆಮ್ಮೆ ಎಂದರು.
ಇನ್ನೂ ಯಕ್ಷಗಾನ, ತುಳು ಸಿನೆಮಾ ರಂಗದ ಹಾಸ್ಯ ನಟನಿಗೆ ಹಾಗು ಬಿಲ್ಲವ ಸಮಾಜದ ಸಾಧಕರಿಗೆ ಸನ್ಮಾನ ಮಾಡಲಾಯಿತು.

ABOUT THE AUTHOR

...view details