ತಪ್ಪು ಮಾಡಿಲ್ಲವೆಂದಾದರೆ ದಾಖಲೆ ಸಲ್ಲಿಸಿ ಹೊರಬನ್ನಿ: ಡಿಕೆಶಿಗೆ ಗುತ್ತೇದಾರ್ ಟಾಂಗ್ - ಚಿದಂಬರಂ ಪರಿಸ್ಥಿತಿ
ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನ ಬಂಧಿಸಿದ್ದಾರೆ ಎನ್ನುವ ಮಾತ್ರಕ್ಕೆ ಪ್ರತಿಭಟನೆ ನಡೆಸುವುದು ಸರಿಯಲ್ಲ. ತಪ್ಪು ಮಾಡಿಲ್ಲ ಎಂದರೆ ದಾಖಲೆಗಳನ್ನು ನೀಡಿ ಅವರು ಹೊರಬರಲಿ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ.

ತಪ್ಪು ಮಾಡಿಲ್ಲ ಎಂದರೆ ದಾಖಲೆ ಸಲ್ಲಿಸಿ ಹೊರ ಬನ್ನಿ: ಡಿಕೆಶಿಗೆ ಗುತ್ತೇದಾರ್ ಟಾಂಗ್
ಬೆಂಗಳೂರು:ಇಡಿ ಅಧಿಕಾರಿಗಳು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನ ಬಂಧಿಸಿದ್ದಾರೆ ಎನ್ನುವ ಮಾತ್ರಕ್ಕೆ ಪ್ರತಿಭಟನೆ ನಡೆಸುವುದು ಸರಿಯಲ್ಲ. ಅವರು ತಪ್ಪು ಮಾಡಿಲ್ಲವೆಂದಾದರೆ ಸೂಕ್ತ ದಾಖಲೆಗಳನ್ನು ನೀಡಿ ಹೊರಬರಲಿ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ.
ತಪ್ಪು ಮಾಡಿಲ್ಲ ಎಂದರೆ ದಾಖಲೆ ಸಲ್ಲಿಸಿ ಹೊರ ಬನ್ನಿ: ಡಿಕೆಶಿಗೆ ಗುತ್ತೇದಾರ್ ಟಾಂಗ್
ಇನ್ನು ದೇಶದ ಉತ್ತಮ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಪರಿಸ್ಥಿತಿ ಇಂದು ಏನಾಗಿದೆ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಯಾವ ಪಕ್ಷದವರೇ ಇರಲಿ ಯಾರು ತಪ್ಪು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸಲಿ ಎಂದು ಗುತ್ತೇದಾರ್ ಹೇಳಿದ್ರು.
ಇನ್ನು ನಾನು ಯಾವುದೇ ಬೇಡಿಕೆ ಇಟ್ಟು ಬಿಜೆಪಿಗೆ ಬಂದಿಲ್ಲ. ಮೋದಿ ನಾಯಕತ್ವವನ್ನ ವಿಶ್ವವೇ ಮೆಚ್ಚಿದೆ. ಅವರ ಕೈ ಬಲಪಡಿಸಬೇಕು, ಕೆಲವೇ ಜನರ ಕೈಗೊಂಬೆಯಾದ ಕಾಂಗ್ರೆಸ್ನಲ್ಲಿ ಸೋಲಿಲ್ಲದವರಿಗೆ ಸೋಲು ತೋರಿಸಿ ಗುರಿ ಸಾಧಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಭಾಗಕ್ಕೆ ಪ್ರಾತಿನಿಧ್ಯ ಸಿಗಲಿದೆ. ಸಂಪೂರ್ಣ ಬಹುಮತ ಬಂದಿದ್ದರೆ ತಾರತಮ್ಯ ಇರುತ್ತಿರಲಿಲ್ಲ. 105 ಜನ ಗೆದ್ದಿದ್ದೇವೆ. ಕಾಂಗ್ರೆಸ್, ಜೆಡಿಎಸ್ ನಿಂದ ಕೆಲವರು ಬಿಜೆಪಿಗೆ ಸಹಕಾರ ಕೊಡಬೇಕು ಎಂದು ಬಂದಿದ್ದಾರೆ. ನ್ಯಾಯಾಲಯದಲ್ಲಿ ಅವರ ಪ್ರಕರಣ ಏನಾಗಲಿದೆ ಎಂದು ಕಾದು ನೋಡಿ ಸಿಎಂ ಸಂಪುಟ ವಿಸ್ತರಣೆ ಮಾಡಲಿದ್ದಾರೆ. ಆಗ ನಮ್ಮ ಭಾಗಕ್ಕೂ ಅವಕಾಶ ಸಿಗಲಿದೆ ಎಂದು ಗುತ್ತೇದಾರ್ ವಿಶ್ವಾಸ ವ್ಯಕ್ತಪಡಿಸಿದರು.