ಕರ್ನಾಟಕ

karnataka

ETV Bharat / state

ನಕಲಿ ಜಿಪಿಎಸ್ ಆ್ಯಪ್ ಬಳಸಿ ಹಣ ಸಂಪಾದನೆ: ಬಂಧಿತ ಆರೋಪಿಗಳ ಪೈಕಿ ಓರ್ವನಿಗೆ ಕೊರೊನಾ! - Infection in one of the arrested accused

ನಕಲಿ ಜಿಪಿಎಸ್ ಆ್ಯಪ್ ಬಳಸಿ ದಿನಕ್ಕೆ 15ರಿಂದ 20 ಟ್ರಿಪ್ ಹೋಗಿರುವುದಾಗಿ ಹೇಳಿ ಓಲಾ ಕಂಪನಿಯಿಂದ ಪ್ರೋತ್ಸಾಹಧನ ಪಡೆಯುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಓರ್ವನಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.

ಕೊರೊನಾ ಸೋಂಕು
ಕೊರೊನಾ ಸೋಂಕು

By

Published : Jun 11, 2020, 7:33 PM IST

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಕ್ಯಾಬ್​ ಬುಕ್​ ಮಾಡಿ ನಕಲಿ ಜಿಪಿಎಸ್​ ಮೂಲಕ ದಿನಕ್ಕೆ 15ರಿಂದ 20 ಟ್ರಿಪ್​ ಹೋಗಿರುವುದಾಗಿ ಹೇಳಿ ಓಲಾ ಕಂಪನಿಯಿಂದ ಹಣ ಪಡೆಯುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದರಲ್ಲಿ ಓರ್ವನಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.

ಬಂಧಿತ ಆರೋಪಿಗಳ ಪೈಕಿ ಓರ್ವನಿಗೆ ಸೋಂಕು

ನಕಲಿ ಜಿಪಿಎಸ್ ಆ್ಯಪ್ ಬಳಸಿ ದಿನಕ್ಕೆ 15ರಿಂದ 20 ಟ್ರಿಪ್ ಹೋಗಿರುವುದಾಗಿ ಹೇಳಿ ಓಲಾ ಕಂಪನಿಯಿಂದ ಪ್ರೋತ್ಸಾಹಧನ ಪಡೆಯುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಸೈಬರ್ ಕ್ರೈಮ್​ನಡಿ ದೂರು‌ ದಾಖಲಿಸಿಕೊಂಡು ತನಿಖೆ‌ ನಡೆಸಿ, ಆರೋಪಿಗಳನ್ನು ಬಂಧಿಸಿ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ‌ ಓರ್ವನಿಗೆ‌ ಕೊರೊನಾ ಸೋಂಕು ಇರುವುದು ದೃಢವಾಗಿದೆ.

ಆರೋಪಿಗಳ ಜೊತೆ ಪ್ರಾಥಮಿಕ ಸಂಪರ್ಕದಲ್ಲಿರುವ ವ್ಯಕ್ತಿಗಳ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಸಿಸಿಬಿ ಕಚೇರಿ ಸ್ಯಾನಿಟೈಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ABOUT THE AUTHOR

...view details