ಬೆಂಗಳೂರು :ಮೇಕ್ ಇನ್ ಇಂಡಿಯಾ ಅಭಿಯಾನದ ಸಿಂಹದ ಗುರುತಿನ ಲಾಂಛನವನ್ನು ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಬಿಬಿಎಂಪಿ ಇದೇ ವಾರದಲ್ಲಿ ಪ್ರತಿಷ್ಠಾಪಿಸಲಿದೆ.
ಮೇಕ್ ಇನ್ ಇಂಡಿಯಾಗೆ ಕರ್ನಾಟಕ ಅತಿ ಹೆಚ್ಚು ಕೊಡುಗೆ ನೀಡುತ್ತಿದ್ದು, ಇದರ ಲಾಂಛನವನ್ನು ಇಲ್ಲಿ ಪ್ರತಿಷ್ಠಾಪಿಸುತ್ತಿರುವುದು ಹೆಮ್ಮೆಯ ವಿಷಯ. ಒಟ್ಟು ₹7.56 ಲಕ್ಷ ವೆಚ್ಚದಲ್ಲಿ 1140 ಕೆಜಿ ತೂಕದ, 23 ಫೀಟ್ ಉದ್ದ, 4.5 ಫೀಟ್ ಅಗಲ, 10 ಫೀಟ್ ಎತ್ತರದ ಘರ್ಜಿಸುತ್ತಿರುವ ಸಿಂಹದ ಲಾಂಛನ ಇದಾಗಿದೆ.