ಕರ್ನಾಟಕ

karnataka

ETV Bharat / state

ಸಿಎಂ ಕೊಟ್ಟ ಭರವಸೆ ಈಡೇರಿಸಲಿ: ಕೂಡಲಸಂಗಮ ಶ್ರೀ ಒತ್ತಾಯ

ಇತ್ತೀಚೆಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬೇಡಿಕೆ ಈಡೇರಿಸುವಂತೆ ಭರವಸೆ ನೀಡಿದ ಸಿಎಂ 28-11-2020 ರೊಳಗಾಗಿ ಈ ಕುರಿತು ಉತ್ತಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದರು. ಸಿಎಂ ನೀಡಿರುವ ಭರವಸೆಯನ್ನು ಶೀಘ್ರದಲ್ಲೇ ಈಡೇರಿಸಬೇಕೆಂದು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತೊಮ್ಮೆ ಒತ್ತಾಯಿಸಿದ್ದಾರೆ.

basava jaya mrutyunjaya swamiji
ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ

By

Published : Nov 27, 2020, 1:37 PM IST

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಾಗೂ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಕುರಿತು ಸಿಎಂ ನೀಡಿರುವ ಭರವಸೆಯನ್ನು ಶೀಘ್ರದಲ್ಲೇ ಈಡೇರಿಸುವಂತೆ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠ ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಸಿಎಂಗೆ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯ

ನಗರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಈ ಕುರಿತು ಅವರು ಮಾತನಾಡಿದರು. ಈ ಹಿಂದೆ ತಮ್ಮ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬೇಡಿಕೆ ಈಡೇರಿಸುವಂತೆ ಭರವಸೆ ನೀಡಿದ್ದ ಸಿಎಂ 28-11-2020 ರೊಳಗಾಗಿ ಈ ಕುರಿತು ಉತ್ತಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದರು. ಬಳಿಕ ನಮ್ಮ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿದಾಗಲೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಪಂಚಮಸಾಲಿ ಸಮುದಾಯವನ್ನು ರಾಜ್ಯದ 2ಎ ಮೀಸಲಾತಿಗೆ ಸೇರ್ಪಡೆ ಮಾಡುವ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಇದನ್ನು ಓದಿ:ಲಿಂಗಾಯತ ಪಂಚಮಸಾಲಿ ಮೀಸಲಾತಿ ಕುರಿತು ಶೀಘ್ರ ನಿರ್ಧಾರ: ಸಿಎಂ ಭರವಸೆ

ನಮ್ಮ ಸಮುದಾಯದ 104 ಒಳಪಂಗಡಗಳಲ್ಲಿ ಈಗಾಗಲೇ 32 ಒಳಪಂಗಡಗಳು ಕೇಂದ್ರದ ಒಬಿಸಿ ಅಡಿಯಲ್ಲಿದ್ದಾರೆ. ಉಳಿದ 72 ಒಳಪಂಗಡಗಳನ್ನು ಕೂಡಾ ಒಬಿಸಿ ಅಡಿಯಲ್ಲಿ ಸೇರ್ಪಡೆ ಮಾಡಲು ಸರಿಯಾದ ದಾಖಲಾತಿಗಳನ್ನು ಒದಗಿಸಬೇಕಿದೆ. ಸಾಧ್ಯವಾದರೆ ಆಯೋಗ ರಚನೆ ಮಾಡಿ ಆ ಮೂಲಕ ದಾಖಲೆಗಳನ್ನು ನೀಡಿ ಶಿಫಾರಸು ಮಾಡಬೇಕಿದೆ ಎಂದರು.

ಇದನ್ನು ಓದಿ:ಪಂಚಮಸಾಲಿಗೆ 2ಎ ಮೀಸಲಾತಿ ಕುರಿತು ಇವತ್ತೇ ಅಭಿಪ್ರಾಯ ತಿಳಿಸಬೇಕು: ಸಿಎಂಗೆ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹ

ರಾಜ್ಯದಲ್ಲಿ ಜಾತಿ ಮೀಸಲಾತಿಯಲ್ಲಿ ಸೇರ್ಪಡೆಯಾದರೆ ರಾಜ್ಯದ ಲಿಂಗಾಯತ ಸಮುದಾಯಕ್ಕೆ ಅನುಕೂಲವಾಗಲಿದೆ. ದೇಶದಲ್ಲಿ ಅಲ್ಪಸಂಖ್ಯಾತ ಇಲಾಖೆಯಡಿ ಸೇರ್ಪಡೆ ಮಾಡಿದರೆ, ದೇಶಾದ್ಯಂತ ಇರುವ ಲಿಂಗಾಯುತರಿಗೆ ಉಪಯೋಗವಾಗಲಿದೆ ಎಂದರು. ಇನ್ನು ನಿಗಮ ಮಂಡಳಿ ರೂಪಿಸಿರುವುದರಿಂದ ಹಣ ಹೆಚ್ಚಾಗಿ ದುರುಪಯೋಗ ಆಗುವ ಸಾಧ್ಯತೆ ಇದೆ. ಸದ್ಯ ಮಾಡಿರುವ ನಿಗಮಕ್ಕೆ ಬಸವಣ್ಣನವರ ಹೆಸರಿಡುವಂತೆ ಒತ್ತಾಯಿಸಿದರು. ಮುಂದಿನ ಸಂಚಿವ ಸಂಪುಟ ಸಭೆಯಲ್ಲಾದರೂ ಸಿಎಂ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಡ ಹೇರುವುದಾಗಿ ತಿಳಿಸಿದರು.

ABOUT THE AUTHOR

...view details