ಕರ್ನಾಟಕ

karnataka

ETV Bharat / state

ತೆಲಗು ಖ್ಯಾತ ಗಾಯಕಿ ತಂದೆ ಪ್ರೊಫೆಸರ್ ಎ ಕೆ ರಾವ್ ಸಾವಿನ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ - ಟಾಲಿವುಡ್​ ಗಾಯಕಿ ಹರಿಣಿ ತಂದೆ ಬೆಂಗಳೂರಿನಲ್ಲಿ ಅನುಮಾನಾಸ್ಪದ ಸಾವು

ಹಣಕೊಟ್ಟು ಲೋನ್ ಕೂಡ ಸಿಗದ ಗಿರೀಶ್ ಹಾಗೂ ಫನಿತಾರಂ, ಎ.ಕೆ.ರಾವ್ ಹಾಗೂ ಮೂವರು ಆರೋಪಿಗಳ ವಿರುದ್ಧ ಸದ್ದುಗುಂಟೆಪಾಳ್ಯ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಿಸಿದ್ದರು. ಪೊಲೀಸರು ಏಸ್ ಕ್ಯಾಪಿಟಲ್ ಫೈನಾನ್ಸ್ ಕಂಪನಿಯ ಆರೋಪಿಗಳಾದ ಡೇನಿಯಲ್, ವಿವೇಕಾನಂದ, ರಾಘವನ್ ಸಿಗದ ಕಾರಣ ಪ್ರೊಫೆಸರ್ ಎ.ಕೆ.ರಾವ್ ಅವರನ್ನ ವಿಚಾರಣೆ ನಡೆಸಿ ಕಳಿಸಿದ್ದರು..

ಪ್ರೊಫೆಸರ್ ಎ.ಕೆ.ರಾವ್ ಸಾವಿನ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್
ಪ್ರೊಫೆಸರ್ ಎ.ಕೆ.ರಾವ್ ಸಾವಿನ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್

By

Published : Nov 27, 2021, 3:26 PM IST

ಬೆಂಗಳೂರು :ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಗಾಯಕಿ ಹರಿಣಿ ತಂದೆ ಪ್ರೊಫೆಸರ್ ಎ.ಕೆ.ರಾವ್ ಸಾವಿನ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಎ.ಕೆ.ರಾವ್ ಅವರದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬ ಅನುಮಾನಗಳು ದಟ್ಟವಾಗಿವೆ. ಇದಕ್ಕೆ ಪುಷ್ಟಿ ನೀಡುವಂತೆ ಎ.ಕೆ.ರಾವ್ ಸಾವಿಗೂ ಮುನ್ನ ಅದೇ ದಿನ ಪೊಲೀಸರ ವಿಚಾರಣೆ ಎದುರಿಸಿದ್ದರು ಎಂಬ ಸ್ಫೋಟಕ ವಿಚಾರ ಹೊರ ಬಂದಿದೆ.

ತೆಲುಗಿನ ಖ್ಯಾತ ಗಾಯಕಿ ಹರಿಣಿ ತಂದೆ ನಿವೃತ್ತ ಪ್ರೊಫೆಸರ್ ಎ.ಕೆ.ರಾವ್ ಸಾವಿನ ತನಿಖೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಾವ್, ನವೆಂಬರ್ 23ರಂದು ಯಲಹಂಕ-ರಾಜಾನುಕುಂಟೆ ರೈಲ್ವೆ ಹಳಿ ಮಾರ್ಗದಲ್ಲಿ ಶವವಾಗಿ ಪತ್ತೆಯಾಗಿದ್ದರು. ಚಾಕುವಿನಿಂದ ಕುತ್ತಿಗೆ ಹಾಗೂ ಎಡಗೈ ಕತ್ತರಿಸಿದ್ದ ಸ್ಥಿತಿಯಲ್ಲಿ ರಾವ್ ಮೃತ ದೇಹ ಪತ್ತೆಯಾಗಿತ್ತು.

ಪ್ರಕರಣದ ಕುರಿತುಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಷಿ ಮಾಹಿತಿ ನೀಡಿರುವುದು..

ಸ್ಥಳಕ್ಕಾಗಮಿಸಿದ್ದ ಕುಟುಂಬಸ್ಥರು ಎ.ಕೆ.ರಾವ್‌ರನ್ನ ಕೊಲೆ ಮಾಡಿದ್ದಾರೆಂದು ಆರೋಪಿಸಿ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ರಾವ್ ಶವವಾಗಿ ಪತ್ತೆಯಾಗುವ ಮುನ್ನ ಎರಡು ವಂಚನೆ ಪ್ರಕರಣ ಸಂಬಂಧ ಸದ್ದುಗುಂಟೆ ಪೊಲೀಸರ ವಿಚಾರಣೆ ಎದುರಿಸಿ ಹೊರ ಬಂದಿದ್ದರು‌.

ಪರಿಚಯಸ್ಥರಿಗೆ ಲೋನ್‌ ಕೊಡಿಸುವ ಭರವಸೆ ನೀಡಿದ್ದ ರಾವ್ :ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಫ್ರೊಫೆಸರ್ ಆಗಿದ್ದ ಎ.ಕೆ.ರಾವ್, ಇತ್ತೀಚೆಗೆ ನಿವೃತ್ತರಾಗಿದ್ದರು. ನಿವೃತ್ತಿ ನಂತರ ಬೆಂಗಳೂರಲ್ಲಿ ಹೊಸದಾಗಿ ಲೋನ್ ಕನ್ಸಲ್ಟೆನ್ಸಿ ಕಂಪನಿಯನ್ನ ತೆರೆದಿದ್ದರು.

ಈ ವೇಳೆ ಎ.ಕೆ.ರಾವ್ ಅವರಿಗೆ ಏಸ್ ವೆಂಚರ್ಸ್ ಕ್ಯಾಪಿಟಲ್ ಫೈನಾನ್ಸ್ ಕಂಪನಿಯ ಡೆನಿಯಲ್ ಆರ್ಮ್ ಸ್ಟ್ರಾಂಗ್, ರಾಘವನ್ ಹಾಗೂ ವಿವೇಕಾನಂದ ಎಂಬುವರ ಪರಿಚಯವಾಗಿದ್ದರು. ರಾವ್ ಅವರಿಗೆ ಪರಿಚಯವಾಗಿದ್ದ ಫೈನಾನ್ಸರ್ ರಿಯಲ್ ಎಸ್ಟೇಟ್​ ಪ್ರಾಜೆಕ್ಟ್‌ಗಳಿಗೆ ನೂರಾರು ಕೋಟಿ ಲೋನ್ ಕೊಡುವುದಾಗಿ ತಿಳಿಸಿದ್ದರು.

ಇವರ ಮಾತನ್ನ ನಂಬಿದ್ದ ಎ.ಕೆ.ರಾವ್ ತಮ್ಮ ಲೋನ್ ಕನ್ಸಲ್ಟೆನ್ಸಿ ಕಂಪನಿ ಮೂಲಕ ಲೋನ್ ಪಡೆಯಲು ಯತ್ನಿಸಿದ್ದ ಅರುಣಾಚಲ ಪ್ರದೇಶ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಫನಿತಾರಂಗೆ 240 ಕೋಟಿ ಲೋನ್ ಹಾಗೂ ಬೆಂಗಳೂರಿನ ಉದ್ಯಮಿ ಗಿರೀಶ್‌ಗೆ 150 ಕೋಟಿ ಲೋನ್​​ ಕೊಡಿಸುವ ಭರವಸೆ ನೀಡಿದ್ದರಂತೆ.

ಇದನ್ನೂ ಓದಿ : ಟಾಲಿವುಡ್​ ಗಾಯಕಿ ಹರಿಣಿ ತಂದೆ ಬೆಂಗಳೂರು ರೈಲ್ವೆ ಟ್ರ್ಯಾಕ್​ನಲ್ಲಿ ಅನುಮಾನಾಸ್ಪದ ಸಾವು!

ರಾವ್ ಮಾತನ್ನ ನಂಬಿದ್ದ ಗಿರೀಶ್ ಹಾಗೂ ಫನಿತಾರಂ ತಮ್ಮ ಪ್ರಾಜೆಕ್ಟ್‌ಗಳಿಗೆ ಲೋನ್ ಸಿಗತ್ತೆ ಎಂದು ಆರೋಪಿಗಳಾದ ಡೆನಿಯಲ್ ಆರ್ಮ್‌ಸ್ಟ್ರಾಂಗ್, ರಾಘವನ್ ಹಾಗೂ ವಿವೇಕಾನಂದರನ್ನ ಬೆಂಗಳೂರಿನ ಕೃಷ್ಣನಗರದ ಕಚೇರಿಯಲ್ಲಿ ಭೇಟಿಯಾಗಿದ್ದರು. ಈ ವೇಳೆ ಇಬ್ಬರಿಗೂ ಕೇಳಿದಷ್ಟು ಲೋನ್ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು‌. ಅಲ್ಲದೇ ಲೋನ್​​ಗೂ ಮುಂಚಿತವಾಗಿ ಮೂರು ತಿಂಗಳ EMI ಮೊದಲೇ ಕಟ್ಟಬೇಕೆಂದು ತಿಳಿಸಿದ್ದರು.

ಅದರಂತೆ 240 ಕೋಟಿ ಲೋನ್‌ಗೆ ಫನಿತಾರಂ 3.60 ಕೋಟಿ ಹಾಗೂ ಗಿರೀಶ್ 150 ಕೋಟಿಗೆ 3 ಕೋಟಿ ಮುಂಗಡವಾಗಿ EMI ಪಾವತಿಸಿದ್ದರು. ಅಷ್ಟೇ ನೋಡಿ, ಹಣ ಪಾವತಿಯಾದ ನಂತರ ಏಸ್ ಕ್ಯಾಪಿಟಲ್ ಫೈನಾನ್ಸ್ ಕಂಪನಿಯ ಮೂವರು ಆರೋಪಿಗಳು ಮೊಬೈಲ್ ಸ್ವಿಚ್ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ. ಕಡೆಗೆ ಹಣ ಕೊಟ್ಟ ಗಿರೀಶ್ ಹಾಗೂ ಫನಿತಾರಂ ಎ.ಕೆ.ರಾವ್ ಬಳಿ ಪ್ರಶ್ನಿಸಿದ್ದರು. ಈ ವೇಳೆ ಎ.ಕೆ.ರಾವ್‌ಗೆ ತಾನು ಮೋಸ ಹೋಗಿರುವುದು ಗೊತ್ತಾಗಿತ್ತು.

ಹಣಕೊಟ್ಟು ಲೋನ್ ಕೂಡ ಸಿಗದ ಗಿರೀಶ್ ಹಾಗೂ ಫನಿತಾರಂ, ಎ.ಕೆ.ರಾವ್ ಹಾಗೂ ಮೂವರು ಆರೋಪಿಗಳ ವಿರುದ್ಧ ಸದ್ದುಗುಂಟೆಪಾಳ್ಯ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಿಸಿದ್ದರು. ಪೊಲೀಸರು ಏಸ್ ಕ್ಯಾಪಿಟಲ್ ಫೈನಾನ್ಸ್ ಕಂಪನಿಯ ಆರೋಪಿಗಳಾದ ಡೇನಿಯಲ್, ವಿವೇಕಾನಂದ, ರಾಘವನ್ ಸಿಗದ ಕಾರಣ ಪ್ರೊಫೆಸರ್ ಎ.ಕೆ.ರಾವ್ ಅವರನ್ನ ವಿಚಾರಣೆ ನಡೆಸಿ ಕಳಿಸಿದ್ದರು.

ಪೊಲೀಸರ ವಿಚಾರಣೆ ನಂತರ ತನ್ನ ಗೆಳೆಯನಿಗೆ ಪ್ರೊಫೆಸರ್ ತನಗೆ ಫೈನಾನ್ಸಿಯರ್​​ಗಳು ನಂಬಿಸಿ ಮೋಸ ಮಾಡಿದ ಬಗ್ಗೆ ಹೇಳಿ ಕೊಂಡಿದ್ದರು. ಅದಾಗಿ ಕೆಲಹೊತ್ತಿಗೆ ರಾವ್​ ರೈಲ್ವೆ ಟ್ರಾಕ್ ಬಳಿ ಶವವಾಗಿ ಪತ್ತೆಯಾಗಿದ್ದರು. ಸದ್ಯ ಎ.ಕೆ.ರಾವ್ ಸಾವಿನ ಕೇಸ್ ತನಿಖೆಯನ್ನ ರೈಲ್ವೆ ಪೊಲೀಸರು ನಡೆಸುತ್ತಿದ್ದರೆ, ಕೋಟಿ ಕೋಟಿ ಲೋನ್ ಕೊಡುತ್ತೇವೆ ಎಂದು ಹೇಳಿ ವಂಚಿಸಿ ಕಾಲ್ಕಿತ್ತಿರುವ ಡೇನಿಯಲ್ ಆರ್ಮ್ ಸ್ಟ್ರಾಂಗ್, ವಿವೇಕಾನಂದ ಹಾಗೂ ರಾಘವನ್‌ರನ್ನ ಸದ್ದುಗುಂಟೆಪಾಳ್ಯ ಪೊಲೀಸರು ಬೆನ್ನು ಬಿದ್ದಿದ್ದಾರೆ.

For All Latest Updates

ABOUT THE AUTHOR

...view details