ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದು, 11 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 11 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ - CM BSY
ಬಿಎಸ್ವೈ ಸಿಎಂ ಆದ ಬಳಿಕ ಪೊಲೀಸ್ ಅಧಿಕಾರಿಗಳಿಗೆ ನಡೆಸಿದ ಮೊದಲ ಸಭೆ ಬೆನ್ನಲ್ಲೇ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದಾರೆ. 11 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಯಾವ ಅಧಿಕಾರಿಗಳು ಎಲ್ಲಿಗೆ ವರ್ಗವಾದರು? ಅವೆಲ್ಲದರ ಡಿಟೇಲ್ಸ್ ಇಲ್ಲಿದೆ.
ಮುಖ್ಯಮಂತ್ರಿ ಬಿಎಸ್ವೈ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಹಿರಿಯ ಐಪಿಎಸ್ ಅಧಿಕಾರಿಗಳ ಸಭೆ ಮುಗಿದ ಬಳಿಕ ಗೃಹ ಇಲಾಖೆ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿಗಳಾದ ಡಾ. ಅಮರ್ ಕುಮಾರ್ ಪಾಂಡೆ ಅವರನ್ನು ಬೆಂಗಳೂರು ನಗರ ಕಾನೂನು ಸುವ್ಯವಸ್ಥೆ ವಿಭಾಗ, ಕಮಲ್ ಪಂತ್ ಅವರನ್ನು ಗುಪ್ತಚರ ವಿಭಾಗದ ಎಡಿಜಿಪಿ, ಕೆಎಸ್ಆರ್ಪಿ ಎಡಿಜಿಪಿಯಾಗಿ ಬಿ.ದಯಾನಂದ್, ಎಸಿಬಿ ಐಜಿಪಿಯಾಗಿ ಎಂ.ಚಂದ್ರಶೇಖರ್, ಮಂಗಳೂರು ಕಮಿಷನರ್ ಆಗಿ ಡಾ. ಎ.ಸುಬ್ರಹ್ಮಣ್ಯ ರಾವ್, ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ಸಂದೀಪ್ ಪಾಟೀಲ್, ರಾಜ್ಯ ಪೊಲೀಸ್ ಅಗ್ನಿಶಾಮಕ ದಳ ಇಲಾಖೆಯ ಡಿಐಜಿ ಹಾಗೂ ಮಾಹಿತಿ ಮತ್ತು ಸಂಪರ್ಕ ವಿಭಾಗದ ಕಮೀಷನರ್ ಆಗಿ ಎಸ್.ಎನ್.ಸಿದ್ದರಾಮಪ್ಪ, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯಾಗಿ ಚೇತನ್ ಸಿಂಗ್ ರಾಥೋಡ್, ರಾಮನಗರ ಎಸ್ಪಿ ಯಾಗಿ ಅನೂಪ್ ಎ. ಶೆಟ್ಟಿ, ಶಿವಮೊಗ್ಗ ಎಸ್ಪಿಯಾಗಿ ಕೆ.ಎಂ.ಶಾಂತರಾಜು ಹಾಗೂ ದಾವಣಗೆರೆಯ ಎಸ್ಪಿಯಾಗಿ ಹನುಮಂತರಾಯ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ಕೆಎಸ್ಆರ್ಪಿ ಎಡಿಜಿಪಿಯಾಗಿದ್ದ ಭಾಸ್ಕರ್ ರಾವ್ ಹಾಗೂ ಬೆಂಗಳೂರು ಕೇಂದ್ರ ವಿಭಾಗ ಡಿಸಿಪಿಯಾಗಿದ್ದ ದೇವರಾಜ್ ಅವರಿಗೆ ಸ್ಥಳ ನಿಯುಕ್ತಿ ತೋರಿಸಿಲ್ಲ.