ಕರ್ನಾಟಕ

karnataka

ಮೇಜರ್ ಸಂದೀಪ್ ಉನ್ನಿಕೃಷ್ಣನ್, ಹುತಾತ್ಮ ಯೋಧರಿಗೆ ಕ್ಯಾಂಡಲ್ ಲೈಟ್ ನಮನ

By

Published : Nov 27, 2019, 10:13 AM IST

ಯಲಹಂಕದ ರೋಟ್ರ್ಯಾಕ್ಟ್ ಸಂಸ್ಥೆ, ಸಿ.ಆರ್.ಫಿ.ಎಫ್ ಹಾಗೂ ಕರ್ನಾಟಕ ಪೊಲೀಸ್ ಇಲಾಖೆ ಸಹಯೋಗದಲ್ಲಿ ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ಕ್ಯಾಂಡಲ್ ಲೈಟ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ಇತರ ಯೋಧರ ಬಲಿದಾನ ಸ್ಮರಣಾರ್ಥ ಮೆರವಣಿಗೆ ನಡೆಸುವ ಮೂಲಕ ಗೌರವ ಸಲ್ಲಿಸಲಾಯಿತು.

martyrs Candle Light salute
ಹುತಾತ್ಮ ಯೋಧರಿಗೆ ಕ್ಯಾಂಡಲ್ ಲೈಟ್ ನಮನ

ಬೆಂಗಳೂರು:ಕಳೆದ 11 ವರ್ಷಗಳ ಹಿಂದೆ 26/11ರಂದು ಉಗ್ರರು ನಡೆಸಿದ ಮುಂಬೈ ದಾಳಿಯಲ್ಲಿ ಉಗ್ರರ ಹೆಡೆಮುರಿ ಕಟ್ಟಲು ಸೆಣಸಾಡಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸೇರಿದಂತೆ ಇನ್ನಿತರ ಯೋಧರು ತಮ್ಮ ಪ್ರಾಣತ್ಯಾಗ ಮಾಡಿದ್ದರು. ಅವರ ಬಲಿದಾನದ ಸ್ಮರಣಾರ್ಥ ವೀರ ಯೋಧರಿಗೆ ಯಲಹಂಕದಲ್ಲಿ ಕ್ಯಾಂಡಲ್ ಹಚ್ಚಿ ಮೆರವಣಿಗೆ ನಡೆಸುವ ಮೂಲಕ ಗೌರವ ಸ್ಮರಣೆ ಮಾಡಲಾಯಿತು.

ಯಲಹಂಕದ ರೋಟ್ರ್ಯಾಕ್ಟ್ ಸಂಸ್ಥೆ, ಸಿ.ಆರ್.ಫಿ.ಎಫ್ ಹಾಗೂ ಕರ್ನಾಟಕ ಪೊಲೀಸ್ ಇಲಾಖೆ ಸಹಯೋಗದಲ್ಲಿ ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ಕ್ಯಾಂಡಲ್ ಲೈಟ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಸಿ.ಆರ್.ಪಿ.ಎಫ್ ಯೋಧರು, ರೋಟ್ರ್ಯಾಕ್ಟ್ ಸಂಸ್ಥೆ ಸ್ವಯಂಸೇವಕರು, ಸಾರ್ವಜನಿಕರು ಪಾಲ್ಗೊಂಡು ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಈ ವೇಳೆ ಯಲಹಂಕ ಎ.ಸಿ.ಪಿ ಹಾಗೂ ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಸಾಥ್ ನೀಡಿದರು.

ಹುತಾತ್ಮ ಯೋಧರಿಗೆ ಕ್ಯಾಂಡಲ್ ಲೈಟ್ ನಮನ

ಯಲಹಂಕ ಉಪನಗರ 4ನೇ ಹಂತದಲ್ಲಿರುವ ಸರ್ಕಾರಿ ಶಾಲೆಯ ಆವರಣದಲ್ಲಿ ಮೇಜರ್ ಸಂದೀಪ್ ಉನ್ನಿ ಕೃಷ್ಣನ್ ಅವರ ಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಈ ವೇಳೆ ಹುತಾತ್ಮರ ಬಲಿದಾನದ ಬಗ್ಗೆ ವಿವರಿಸಿ ಸಂತಾಪ ಸೂಚಿಸಲಾಯಿತು. ನಂತರ ಕೈಯಲ್ಲಿ ಕ್ಯಾಂಡಲ್ ಲೈಟ್ ಹಿಡಿದು ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆವರೆಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ಯೋಧರು ಹಾಗೂ ಸಾರ್ವಜನಿಕರು ಸಂದೀಪ್ ಉನ್ನಿ ಕೃಷ್ಣನ್ ಅಮರ್ ಹೇ ಎಂದು ಘೋಷಣೆ ಕೂಗಿದರು.

ಈ ವೇಳೆ ಸಿ.ಆರ್.ಪಿ.ಎಫ್ ಸಬ್ ಇನ್ಸ್‌ಪೆಕ್ಟರ್ ಹರೀಶ್ ಮಾತನಾಡಿ, ಮುಂಬೈ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸುವ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಕ್ಯಾಂಡಲ್ ಲೈಟ್ ಮೆರವಣಿಗೆ ನಡೆಸಲಾಗುತ್ತಿದೆ. ಈ ಮೂಲಕ ಮುಂಬೈ ದಾಳಿ ಮರಣವನ್ನಪ್ಪಿದ 174ಜನರ ಆತ್ಮಕ್ಕೂ ಶಾಂತಿ ಸಿಗಲೆಂದು ಪ್ರಾರ್ಥಿಸಲಾಗುತ್ತದೆ ಎಂದರು.

ABOUT THE AUTHOR

...view details