ಕರ್ನಾಟಕ

karnataka

ETV Bharat / state

ಶಾಂತಿ ಕಾಪಾಡಿ: ಟ್ವೀಟ್​ ಮೂಲಕ ಕೆಪಿಸಿಸಿ ಮನವಿ

ಕೆ.ಜಿ ಹಳ್ಳಿಯಲ್ಲಿ ಶಾಸಕ‌ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲಿನ ದಾಳಿ ಹಾಗೂ ಸ್ಥಳದಲ್ಲಿನ ಬಿಗುವಿನ ವಾತಾವರಣಕ್ಕೆ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಂತಿ ಕಾಪಾಡುವಂತೆ ಮನವಿ ಮಾಡಿದೆ.

ಟ್ವೀಟ್​ ಮೂಲಕ ಕೆಪಿಸಿಸಿ ಮನವಿ
ಟ್ವೀಟ್​ ಮೂಲಕ ಕೆಪಿಸಿಸಿ ಮನವಿ

By

Published : Aug 12, 2020, 6:43 AM IST

Updated : Aug 12, 2020, 7:35 AM IST

ಬೆಂಗಳೂರು: ಕೆ.ಜಿ ಹಳ್ಳಿಯಲ್ಲಿ ಶಾಸಕ‌ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲಿನ ದಾಳಿ ಹಾಗೂ ಸ್ಥಳದಲ್ಲಿ ಬಿಗುವಿನ ವಾತಾವರಣಕ್ಕೆ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಂತಿ ಕಾಪಾಡುವಂತೆ ಮನವಿ ಮಾಡಿದೆ.

ಕಾವಲ್ ಬೈರಸಂದ್ರದಲ್ಲಿ ಶಾಂತಿ ಕದಡಿದ್ದು, ಗಲಭೆ ನಡೆಯುತ್ತಿದೆ. ಜನರು ಶಾಂತಿ ಕಾಪಾಡಬೇಕು. ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವನ್ನುಂಟು ಮಾಡುವುದು, ಅಶಾಂತಿ ವಾತಾವರಣ ನಿರ್ಮಿಸುವುದನ್ನು ಮಾಡಬಾರದು ಎಂದು ಕೆಪಿಸಿಸಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಮನವಿ ಮಾಡಿದೆ.

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಘಟನೆಯನ್ನು ಖಂಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಕಾನೂನು ಉಲ್ಲಂಘನೆ ಮಾಡಬಾರದು ಶಾಂತಿಯುತವಾಗಿ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Last Updated : Aug 12, 2020, 7:35 AM IST

ABOUT THE AUTHOR

...view details