ಬೆಂಗಳೂರು:ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಜಿಹಾದಿ ಗ್ಯಾಂಗ್ನ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಹಾದಿ ಗ್ಯಾಂಗ್ ಪ್ರಮುಖ ಆರೋಪಿ ಅಂದರ್: ಈತನ ಗ್ಯಾಂಗ್ ಹಿಂದೆ ಬಿದ್ದದೆ ಸಿಸಿಬಿ ಮೆಹಬೂಬ್ ಪಾಷಾ ಹಿಂದೆ ಬಹಳಷ್ಟು ಪ್ರಭಾವಿಗಳ ಕೈವಾಡವಿರುವ ಹಿನ್ನೆಲೆ ಈತನನ್ನ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈತ ಈ ಹಿಂದೆ ಕರ್ನಾಟಕದಲ್ಲಿ ಸರಣಿ ವಿಧ್ವಂಸಕ ಕೃತ್ಯ ಎಸಗಲು ಸಿದ್ಧನಾಗಿದ್ದ, ಜೊತೆಗೆ ಪ್ರಸ್ತುತ ಈತ ಪೌರತ್ವ ವಿರೋಧಿ ಹೋರಾಟದಲ್ಲೂ ಪ್ರಮುಖ ಪಾತ್ರ ವಹಿಸಿದ್ದ. ಸದ್ಯ ತಮಿಳುನಾಡು ಪೊಲೀಸರ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ನಿನ್ನೆ ಪಾಷಾನನ್ನು ಬಂಧಿಸಿದ್ದಾರೆ.
ಈ ಕುರಿತು ಮಾತಾನಾಡಿದ ನಗರ ಪೊಲೀಸ್ ಆಯುಕ್ತರು, ತಮಿಳುನಾಡು ಪೊಲೀಸರ ಮಾಹಿತಿ ಮೆರೆಗೆ ನಗರದಲ್ಲಿದ್ದ ಐವರು ಜಿಹಾದಿಗಳನ್ನು ಬಂಧಿಸಿ, ಇದೀಗ ಪ್ರಮುಖ ಆರೋಪಿಯನ್ನ ಕೂಡ ಬಂಧಿಸಿದ್ದೀವಿ. ಆದರೆ, ಈತನ ಹಿಂದೆ ಇನ್ನಷ್ಟು ದೊಡ್ಡ ವ್ಯಕ್ತಿಗಳ ಕೈವಾಡ ಇದ್ದು, ಅವರ ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿಸಿದರು.
ಜಿಹಾದಿ ಮೆಹಬೂಬ್ ಪಾಷ ಹಿನ್ನೆಲೆ:
ಮೆಹಬೂಬ್ ಪಾಷ, ಜಿಹಾದಿ ಗ್ಯಾಂಗ್ ನ ಮಾಸ್ಟರ್ ಮೈಂಡ್ ಆಗಿದ್ದು, ಅಲ್ಪ ಸಂಖ್ಯಾತರನ್ನು ಜಿಹಾದ್ಗೆ ಸೆಳೆಯುವ ಸಲುವಾಗಿ ಬೆಂಗಳೂರಿನ ಸದ್ದುಗುಂಟೆಪಾಳ್ಯದಲ್ಲಿ ವಾಸವಾಗಿದ್ದ. ಅಷ್ಟು ಮಾತ್ರವಲ್ಲದೇ, ಈತ ಬೆಂಗಳೂರು ಜಿಹಾದಿ ಗ್ಯಾಂಗ್ ನ ಕಮಾಂಡರ್ ಕೂಡ ಆಗಿದ್ದ. ಹಾಗೆಯೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಜಿಹಾದಿ ಗ್ಯಾಂಗ್ ಸೃಷ್ಟಿ ಮಾಡಲು ಸದಸ್ಯರ ನೇಮಕ, ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸುವ ಕೆಲಸ ಮಾಡ್ತಿದ್ದ. ಹಾಗೆಯೇ ಹೊಸತಾಗಿ ಜಿಹಾದಿಗೆ ಸೇರುವವರಿಗೆ ಬೆಂಗಳೂರು ಹೊರವಲಯ, ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ತರಬೇತಿ ನೀಡುತ್ತಿದ್ದ ಎನ್ನಾಲಾಗಿದೆ.