ಕರ್ನಾಟಕ

karnataka

ETV Bharat / state

ಮನೆ ಕೆಲಸಕ್ಕೆ ಸೇರಿಸಿಕೊಳ್ಳುವಾಗ ಎಚ್ಚರ!.. 35 ಲಕ್ಷ ಮೌಲ್ಯದ ಆಭರಣ ಕದ್ದ ಆರೋಪಿ ಅರೆಸ್ಟ್​ - Bangalore gold and diamond jewelry stolen case

ಮನೆ ಕೆಲಸಕ್ಕೆಂದು ಸೇರಿಕೊಂಡು ಚಿನ್ನಾಭರಣ ದೋಚಿದ್ದ ಕಳ್ಳಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

maid-arrested-for-jewelry-theft-in-house-at-bengaluru
35 ಲಕ್ಷ ಮೌಲ್ಯದ ಆಭರಣ ಕದ್ದ ಕಳ್ಳಿ ಅರೆಸ್ಟ್​

By

Published : Apr 30, 2022, 9:35 PM IST

ಬೆಂಗಳೂರು:ಇತ್ತೀಚೆಗೆ ಮನೆ ಕೆಲಸಕ್ಕೆ ಯಾರನ್ನಾದರೂ ಸೇರಿಸಿಕೊಳ್ಳಬೇಕೆಂದರೂ ಎಚ್ಚರ ವಹಿಸಬೇಕಿದೆ. ಕೆಲಸಕ್ಕೆ ಸೇರಿಕೊಂಡು ಉಂಡ ಮನೆಗೇ ಕನ್ನ ಹಾಕುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಹೀಗೆ ಮನೆ ಕೆಲಸ ಮಾಡುತ್ತ 35 ಲಕ್ಷ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣ ಕಳವು ಮಾಡಿದ್ದ ಆರೋಪಿ ಮಹಿಳೆಯನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೆಲದಿನಗಳ ಹಿಂದೆ ಮಾರತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಬೀಸನಹಳ್ಳಿ ಆದಶ ಪಾಮ್ ರಿಟ್ರೇಟ್ ವಿಲ್ಲಾದಲ್ಲಿ 35 ಲಕ್ಷ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣ ಕಳ್ಳತನವಾಗಿತ್ತು. ವಿಲ್ಲಾದ ಪ್ಲಾಟ್ ನಂಬರ್ 312ರಲ್ಲಿ ಮನೆ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಆರೋಪಿ ಸುಮಾ ಬಂಧಿತ ಮಹಿಳೆಯಾಗಿದ್ದಾಳೆ. ಸುಮಾರು 213 ಗ್ರಾಂ ಚಿನ್ನ-ವಜ್ರದ ಆಭರಣ, 692 ಗ್ರಾಂ ಬೆಳ್ಳಿ ಆಭರಣಗಳು ಸೇರಿ 35 ಲಕ್ಷ ರೂ. ಬೆಲೆಬಾಳುವ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆ ಮಾಲೀಕ ಸಂಜಯ್ ಗುಪ್ತ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಕೆಲಸದಾಕೆ ಸುಮಾಳನ್ನ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಲ್ಲಿ ಆ್ಯಸಿಡ್​ ದಾಳಿ ಬೆನ್ನಲ್ಲೇ ಮತ್ತೊಂದು ಹೀನಕೃತ್ಯ.. ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರ

ABOUT THE AUTHOR

...view details