ಕರ್ನಾಟಕ

karnataka

ETV Bharat / state

'ತಿಂಗಳಿಗೆ ಎರಡು ಬಾರಿ ಕಾರ್ಯಕ್ರಮ, ಬಿಜೆಪಿಯ 150+ ಗುರಿ ಈಗಿನಿಂದಲೇ ಆರಂಭ'

ಹಳೆ ಮೈಸೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟಿಸಲು ಅನೇಕ ಕಾರ್ಯಕ್ರಮ ಮಾಡಲು ಯೋಜಿಸಿದ್ದೇವೆ. ಅಲ್ಲಿರುವ ಕಾಂಗ್ರೆಸ್, ಜೆಡಿಎಸ್​​​​ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಕೂಡ ಮಾಡಿಕೊಳ್ತೀವಿ. 150+ ಈ ವಲಯಗಳಲ್ಲಿ ತುಂಬಿಸುವ ಗುರಿ ನಮ್ಮದಾಗಿದೆ ಎಂದು ಮಹೇಶ್ ಟೆಂಗಿನಕಾಯಿ ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ

By

Published : Jul 16, 2022, 9:52 PM IST

ಬೆಂಗಳೂರು:ದೊಡ್ಡಬಳ್ಳಾಪುರದ ಮಾದರಿಯಲ್ಲೇ ಇನ್ಮುಂದೆ ತಿಂಗಳಿಗೆ ಎರಡು ಬಾರಿ ಕಾರ್ಯಕ್ರಮ ಮಾಡಲು ನಿರ್ಧಾರ ಮಾಡಿದ್ದೇವೆ. ಇದರಲ್ಲಿ ಕೇಂದ್ರದ ನಾಯಕರಾದ ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿಳಿಸಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಿನ್ನೆ ದಿನ ಬಿಜೆಪಿ ಬೈಠಕ್ ಸಭೆ ನಡೆದಿದೆ. 150 ಸೀಟು ಗೆಲ್ಲಲು ಯಾವ ರೀತಿ ಕಾರ್ಯತಂತ್ರ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಆ ಸಭೆಯಲ್ಲಿ ಸಿಎಂ, ಮಾಜಿ ಸಿಎಂಗಳು, ಅಧ್ಯಕ್ಷರು, ಉಸ್ತುವಾರಿಗಳು ಹಾಗೂ ಬಿಎಲ್ ಸಂತೋಷ್ ಭಾಗವಹಿಸಿದ್ರು. ಮೊದಲ ಹಂತದ ಸಭೆಯಲ್ಲಿ 50 ಜನರಿಗೆ ಆಹ್ವಾನ ಮಾಡಿದ್ವಿ. ಇದೇ 28ಕ್ಕೆ ಸಿಎಂ ಒಂದು ವರ್ಷದ ಸಂಭ್ರಮ ಮಾಡಲು ತೀರ್ಮಾನ ಮಾಡಿದ್ದೇವೆ. ದೊಡ್ಡಬಳ್ಳಾಪುರದಲ್ಲಿ ಬೃಹತ್ ಜಾಥಾ ಮಾಡಲು ತೀರ್ಮಾನಿಸಿದ್ದೇವೆ. 50 ವಿಧಾನಸಭಾ ಕ್ಷೇತ್ರ ಗುರುತಿಸಿ, ಸಿಎಂ ಅಲ್ಲಿ ಅಭಿವೃದ್ಧಿ ಕಾರ್ಯಕ್ರಮ ಪ್ರವಾಸ ಮಾಡ್ತಾರೆ. ಆಗಸ್ಟ್‌ 15ರ ನಂತರ ಈ ಕಾರ್ಯಕ್ರಮಕ್ಕೆ ಚಾಲನೆ ಕೊಡ್ತೀವಿ ಎಂದರು.

ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಒಂದು ಜಿಲ್ಲೆ ಒಂದು ದಿನ ಪ್ರವಾಸ ಮಾಡ್ತಾರೆ. ಅಲ್ಲಿ ಬೂತ್ ಅಧ್ಯಕ್ಷರ ಸಮಾವೇಶ, ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸ್ತಾರೆ. ಎಲ್ಲಾ ಮೋರ್ಚಾಗಳ ಬೃಹತ್ ಸಮಾವೇಶ ನಡೆಸಲು ತೀರ್ಮಾನ ಮಾಡಿದ್ದೇವೆ. ಬೂತ್ ಸಶಕ್ತೀಕರಣ ಕಾರ್ಯ ಕೈಗೆ ತೆಗೆದುಕೊಂಡಿದ್ದೇವೆ. ಆಜಾದಿ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದಲ್ಲಿ ಪ್ರತಿಯೊಂದು ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಲು ತೀರ್ಮಾನ ಮಾಡಿದ್ದೇವೆ. 75 ಕಿಲೋ ಮೀಟರ್ ಬೈಕ್ ಜಾಥಾ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ವಿವರಿಸಿದರು.

ಮೊದಲ ಹಂತದಲ್ಲಿ 50 ಕ್ಷೇತ್ರದಲ್ಲಿ ಸಿಎಂ ಪ್ರವಾಸ ಮಾಡ್ತಾರೆ. ಆ ನಂತರ ಎಲ್ಲ ಕ್ಷೇತ್ರಗಳಲ್ಲಿ ಪ್ರವಾಸ ಮಾಡ್ತಾರೆ. ಅಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡ್ತಾರೆ. 50 ಕ್ಷೇತ್ರ ಯಾವುದು ಅಂತಾ ಪಟ್ಟಿ ಮಾಡ್ತಿದ್ದೇವೆ. ಅದನ್ನು ಶೀಘ್ರವೇ ಬಿಡುಗಡೆ ಮಾಡ್ತೀವಿ. ಹಳೆ ಮೈಸೂರು, ಕಲ್ಯಾಣ ಕರ್ನಾಟಕದಲ್ಲಿ 6 ವಲಯಗಳನ್ನಾಗಿ ಮಾಡಿ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಹಳೆ ಮೈಸೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟಿಸಲು ಅನೇಕ ಕಾರ್ಯಕ್ರಮ ಮಾಡಲು ಯೋಜಿಸಿದ್ದೇವೆ. ಅಲ್ಲಿರುವ ಕಾಂಗ್ರೆಸ್, ಜೆಡಿಎಸ್​​​​ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಕೂಡ ಮಾಡಿಕೊಳ್ತೀವಿ. ಈ ವಲಯಗಳಲ್ಲಿ 150+ ತುಂಬಿಸುವ ಗುರಿ ಹೊಂದಿದ್ದು, ಸ್ಟ್ರಾಟಜಿ ಮಾಡಿದ್ದೇವೆ ಎಂದರು.

ಕಾಂಗ್ರೆಸ್​​ನಿಂದ ಯಾವುದೇ ಆತಂಕ ಇಲ್ಲ:ಕಾಂಗ್ರೆಸ್​​ನಿಂದ ನಮಗೆ ಯಾವುದೇ ಆತಂಕ ಇಲ್ಲ. ಆತಂಕ ಪಡಬೇಕಿರೋದು ಕಾಂಗ್ರೆಸ್​ನವರು. ಕಾಂಗ್ರೆಸ್ ದೇಶದಲ್ಲೇ ಅಡ್ರೆಸ್ ಇಲ್ದೆ ಮುಳಗಿ ಹೋಗಿದ್ದಾರೆ ಎಂದು ಎನ್.ರವಿಕುಮಾರ್ ತಿಳಿಸಿದರು. ಅವ್ರು ಸಿದ್ದರಾಮೋತ್ಸವ ಆದರೂ ಮಾಡಲಿ, ಶಿವಕುಮಾರೋತ್ಸವ ಆದರೂ ಮಾಡಲಿ, ಅದು ನಮಗೆ ಸಂಬಂಧ ಇಲ್ಲ. ನಾವು ಸಿಎಂ ಒಂದು ವರ್ಷದ ಸಾಧನೆ ಸಂಭ್ರಮ ಮಾಡ್ತಿದ್ದೇವೆ ಎಂದರು. ಸಿದ್ದರಾಮಯ್ಯರಿಂದ ಭಯ ಇದೆಯಾ ಎಂಬ ಪ್ರಶ್ನೆಗೆ ಸಿದ್ದರಾಮಯ್ಯರನ್ನು ಡಿಕೆಶಿಯವರು ಸ್ವಲ್ಪ ಹಿಡಿದುಕೊಂಡು ಓಡಾಡ್ತಿದ್ದಾರೆ. ಆದರೆ, ಅವರನ್ನು ಮುಂದೆ ಹರಕೆಯ ಕುರಿ ಮಾಡ್ತಾರೆ ನೋಡಿ ಎಂದರು.

ABOUT THE AUTHOR

...view details