ಬೆಂಗಳೂರು: ನಗರದ ಶಾಸಕರ ಭಾವನದಲ್ಲಿ ಉಮೇಶ್ ಕತ್ತಿ ಹಾಗೂ ಉತ್ತರ ಕರ್ನಾಟಕ ಶಾಸಕರ ಸಭೆಯ ಕುರಿತು ಪ್ರತಿಕ್ರಿಯೆ ನೀಡಿದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ನಾನು ಸಾಯೋವರೆಗೆ ಯಡಿಯೂರಪ್ಪ ಜೊತೆ ಇರುತ್ತೇನೆ. ಬಿಜೆಪಿ ಪಕ್ಷ ಬಿಡುವುದಿಲ್ಲ ಎಂದು ಹೇಳಿದರು.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಭಾರತೀಯ ಜನತಾ ಪಕ್ಷವನ್ನು ನರೇಂದ್ರ ಮೋದಿ ನಾಯಕತ್ವ ಸೇರಿದಂತೆ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವವನ್ನು ಒಪ್ಪಿಕೊಂಡಿದ್ದೇವೆ. ಇದಕ್ಕೆ ಬದ್ಧರಾಗಿರುತ್ತೇವೆ ಎಂದರು.