ಬೆಂಗಳೂರು: ವೈದ್ಯಕೀಯ - ದಂತ ವೈದ್ಯಕೀಯ ಪ್ರವೇಶಕ್ಕಾಗಿ ನಡೆದ ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಸೆಕೆಂಡ್ ರ‍್ಯಾಂಕ್ ಪಡೆದ ಬೆಂಗಳೂರಿನ ಮಹೇಶ್ ಆನಂದ್ ತಮ್ಮ ಓದಿನ ಗುಟ್ಟಿನ ಬಗ್ಗೆ ಮಾತನಾಡಿದ್ದಾರೆ. ಮಾರತಹಳ್ಳಿಯ ಶ್ರೀ ಚೈತನ್ಯ ಇನ್ಸ್‌ಟಿಟ್ಯೂಟ್ ವಿದ್ಯಾರ್ಥಿಯಾದ ಮಹೇಶ್ ಆನಂದ್ ನೀಟ್ ಪರೀಕ್ಷೆಯಲ್ಲಿ 720ಕ್ಕೆ 685 ಅಂಕ ಗಳಿಸಿದ್ದಾರೆ.
ನೀಟ್ನಲ್ಲಿ ರಾಜ್ಯಕ್ಕೆ ಸೆಕೆಂಡ್ ರ‍್ಯಾಂಕ್; ಸಾಧನೆ ಹಿಂದಿನ ಸರ್ಕಸ್ ಬಿಚ್ಚಿಟ್ಟ ಸಾಧಕ - etv bharat
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ನಡೆದ ನೀಟ್ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಬೆಂಗಳೂರಿನ ಮಹೇಶ್ ಆನಂದ್ ಎಂಬ ವಿದ್ಯಾರ್ಥಿ ರಾಜ್ಯಕ್ಕೆ ಸೆಕೆಂಡ್ ರ‍್ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದಾನೆ.
ಈ ಮೂಲಕ ರಾಜ್ಯಕ್ಕೆ 2 ನೇ ಮತ್ತು ದೇಶಕ್ಕೆ 43 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ರಾಜ್ಯಕ್ಕೆ 2ನೇ ರ‍್ಯಾಂಕ್ ಪಡೆದಿರುವುದು ಖುಷಿ ತಂದಿದೆ. ತಂದೆ-ತಾಯಿ ನಿರಂತರ ಬೆಂಬಲದಿಂದಲ್ಲೇ ಈ ಯಶಸ್ಸು ಸಾಧ್ಯವಾಯ್ತು. ಕಾಲೇಜಿನಲ್ಲೂ ಶಿಕ್ಷಕರು ಓದಿಗೆ ಹೆಚ್ಚು ಒತ್ತಡ ಕೊಡದೇ, ವಿಷಯ ಅರ್ಥೈಸಿಕೊಳ್ಳಲು ಹೆಚ್ಚು ಸಹಾಯ ಮಾಡಿದ್ದಾರೆ ಅಂತಾ ಓದಿನ ಗುಟ್ಟು ತಿಳಿಸಿದರು.
ಪ್ರತಿ ವಾರ ಶಿಕ್ಷಕರು ತರಗತಿಯಲ್ಲಿ ಪರೀಕ್ಷೆಗಳನ್ನು ಕೊಡುತ್ತಿದ್ದರು. ಹೀಗಾಗಿ ಪರೀಕ್ಷೆಯಲ್ಲಿ ಯಾವ ರೀತಿಯಲ್ಲಿ ಬರೆಯಬೇಕು, ಯಾವ ಪ್ರಶ್ನೆಗೆ ಎಷ್ಟು ಉತ್ತರ ಕೊಡಬೇಕು ಎಂಬೆಲ್ಲ ಟಿಪ್ಸ್ ನೀಡಿದರು. ನೀಟ್ನಲ್ಲಿ ರಾಜ್ಯಕ್ಕೆ ಸೆಕೆಂಡ್ ರ‍್ಯಾಂಕ್ ಬರಲು ಇವೆಲ್ಲ ಸಹಕಾರಿಯಾದವು ಎನ್ನುತ್ತಾರೆ ಮಹೇಶ್ ಆನಂದ್.