ಬೆಂಗಳೂರು:ವಿದ್ವತ್ ಮೇಲೆ ಹಲ್ಲೆ ಮಾಡಿ ಕುಖ್ಯಾತಿ ಪಡೆದಿದ್ದ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಇದೀಗ ಟ್ರಾಫಿಕ್ ಕಂಟ್ರೋಲ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಟ್ರಾಫಿಕ್ ನಿಯಂತ್ರಿಸಲು ರಸ್ತೆಗಿಳಿದ ಹ್ಯಾರಿಸ್ ಪುತ್ರ ನಲಪಾಡ್... ವಿಡಿಯೋ ವೈರಲ್ - Kannada news
ಶಾಂತಿನಗರದ ಗರುಡಾ ಮಾಲ್ ಬಳಿ ಟ್ರಾಫಿಕ್ ಉಂಟಾಗಿತ್ತು. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಮೊಹಮ್ಮದ್ ನಲಪಾಡ್ ಥೇಟ್ ಟ್ರಾಫಿಕ್ ಪೊಲೀಸರಂತೆ ರಸ್ತೆ ಮಧ್ಯೆ ನಿಂತು ಟ್ರಾಫಿಕ್ ಪೊಲೀಸರ ಜೊತೆ ಸೇರಿ ಟ್ರಾಫಿಕ್ ನಿಯಂತ್ರಿಸಿದ್ದಾರೆ.
ಶಾಂತಿನಗರದ ಗರುಡಾ ಮಾಲ್ ಬಳಿ ಟ್ರಾಫಿಕ್ ಉಂಟಾಗಿತ್ತು. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಮೊಹಮ್ಮದ್ ನಲಪಾಡ್ ಥೇಟ್ ಟ್ರಾಫಿಕ್ ಪೊಲೀಸರಂತೆ ರಸ್ತೆ ಮಧ್ಯೆ ನಿಂತು ಟ್ರಾಫಿಕ್ ಪೊಲೀಸರ ಜೊತೆ ಸೇರಿ ಟ್ರಾಫಿಕ್ ನಿಯಂತ್ರಿಸಿದ್ದಾರೆ.
ಸದ್ಯ ನಲಪಾಡ್ನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂಎಲ್ಎ ಪುತ್ರ ಕೇವಲ ಅಧಿಕಾರ ದರ್ಪದಿಂದ ಇರುವುದು ಅಷ್ಟೇ ಅಲ್ಲ, ಸಮಾಜ ಸೇವೆನೂ ಮಾಡ್ತಾರೆ. ಮುಂದೆ ನಮ್ಮ ರಾಜಕೀಯ ನಾಯಕರು ಇದೇ ರೀತಿ ಇರಬೇಕು ಎಂದು ಸಲಹೆ ನೀಡಿದ್ದಾರೆ. ಸದ್ಯ ವಿಡಿಯೋವನ್ನು ಬೆಂಗಳೂರು ಟ್ರಾಫಿಕ್ ಪೊಲೀಸ್ ಪೇಜ್ಗೆ ಟ್ಯಾಗ್ ಮಾಡಲಾಗಿದ್ದು, ಸಖತ್ ವೈರಲ್ ಆಗ್ತಿದೆ.