ಕರ್ನಾಟಕ

karnataka

ETV Bharat / state

ಕರ್ತವ್ಯಲೋಪ: ಮಹದೇವಪುರ ಠಾಣೆ ಇನ್ಸ್​​ಪೆಕ್ಟರ್​, ಹೆಡ್ ಕಾನ್‌ಸ್ಟೆಬಲ್ ಅಮಾನತು - Mahadevapura police station

ಕರ್ತವ್ಯಲೋಪ ಆರೋಪದಡಿ ಮಹದೇವಪುರ ಠಾಣೆ ಇನ್ಸ್​​ಪೆಕ್ಟರ್​​​ ಅಶ್ವತ್ಥನಾರಾಯಣ ಸ್ವಾಮಿ ಹಾಗೂ ಹೆಡ್ ಕಾನ್‌ಸ್ಟೆಬಲ್ ಜಯಕಿರಣ್‌ ಅವರನ್ನು ಪೊಲೀಸ್ ಕಮಿಷನರ್ ಕಮಲ್ ಪಂತ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Mahadevapura police station
ಮಹದೇವಪುರ ಠಾಣೆ

By

Published : Oct 13, 2020, 11:07 PM IST

ಬೆಂಗಳೂರು: ಹೋಟೆಲೊಂದರಲ್ಲಿ ನಡೆಯುತ್ತಿದ್ದ ಜೂಜಾಟದ ವಿರುದ್ಧ ಕ್ರಮ ಕೈಗೊಳ್ಳದೇ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಮಹದೇವಪುರ ಠಾಣೆ ಇನ್ಸ್​​ಪೆಕ್ಟರ್​​​ ಅಶ್ವತ್ಥನಾರಾಯಣ ಸ್ವಾಮಿ ಹಾಗೂ ಹೆಡ್ ಕಾನ್‌ಸ್ಟೆಬಲ್ ಜಯಕಿರಣ್‌ ಅವರನ್ನು ಪೊಲೀಸ್ ಕಮಿಷನರ್ ಕಮಲ್ ಪಂತ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮಹದೇವಪುರ ಠಾಣೆ ವ್ಯಾಪ್ತಿಯಲ್ಲಿರುವ ದೊಡ್ಡನೆಕ್ಕುಂದಿಯ ಬೆಂಗಳೂರು ಇನ್‌ ಹೋಟೆಲ್‌ನಲ್ಲಿ ಜೂಜಾಟ ನಡೆಯುತ್ತಿತ್ತು. ಈ ವೇಳೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ತಮ್ಮ ಠಾಣೆ ವ್ಯಾಪ್ತಿಯಲ್ಲಿ ಜೂಜಾಟ ನಡೆಯುತ್ತಿದ್ದರೂ ಮಾಹಿತಿ ಸಂಗ್ರಹಿಸದೇ ಇನ್ಸ್​​ಪೆಕ್ಟರ್​​ ಹಾಗೂ ಹೆಡ್‌ ಕಾನ್‌ಸ್ಟೆಬಲ್ ಕೃತ್ಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಬ್ಬರು ಕರ್ತವ್ಯಲೋಪ, ನಿರ್ಲಕ್ಷ್ಯ ಹಾಗೂ ದುರ್ನಡತೆ ಪ್ರದರ್ಶಿಸಿರುವುದು ಪ್ರಾಥಮಿಕ ತನಿಖೆಯಿಂದ ಕಂಡು ಬಂದಿದೆ. ಇಲಾಖೆ ಶಿಸ್ತು ಕ್ರಮ ಬಾಕಿ ಇರಿಸಿ ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಕಮಲ್ ಪಂತ್ ಆದೇಶದಲ್ಲಿ ತಿಳಿಸಿದ್ದಾರೆ.

ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಶಶಿ ಎಂಬಾತ, ಹೋಟೆಲ್ ನಡೆಸುತ್ತಿದ್ದನು. ಹೊಟೇಲ್​ನ ಸಭಾಂಗಣದಲ್ಲಿ ಜೂಜಾಟಕ್ಕೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದು, ಪ್ರತಿಯೊಬ್ಬರಿಂದ 5 ಸಾವಿರ ಪ್ರವೇಶ ಶುಲ್ಕ ಪಡೆಯುತ್ತಿದ್ದ ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್ ನೇತೃತ್ವದ ತಂಡ ನ್ಯಾಯಾಲಯದ ವಾರಂಟ್ ಪಡೆದು ಭಾನುವಾರ ದಾಳಿ ಮಾಡಿತ್ತು.

ದಾಳಿ ಸಂದರ್ಭದಲ್ಲಿ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ 80 ಮಂದಿಯನ್ನು ಬಂಧಿಸಲಾಗಿತ್ತು. ಐಷಾರಾಮಿ ಕಾರುಗಳಲ್ಲಿ ಹೋಟೆಲ್‌ಗೆ ಬರುತ್ತಿದ್ದ ಆರೋಪಿಗಳು, ಜೂಜಾಟವಾಡಿ ಹೋಗುತ್ತಿದ್ದರು. ದಾಳಿ ವೇಳೆ 85 ಲಕ್ಷ ನಗದು ಹಾಗೂ 87 ಗ್ರಾಂ ಚಿನ್ನಾಭರಣ ಜಪ್ತಿ ಸಹ ಮಾಡಲಾಗಿತ್ತು. ಮಹದೇವಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳದೇ ಇದ್ದ ಕಾರಣ ಇಬ್ಬರನ್ನು ಅಮಾನತು ಮಾಡಲಾಗಿದೆ.

ABOUT THE AUTHOR

...view details