ಬೆಂಗಳೂರು: ಮಹದಾಯಿ ಯೋಜನೆಗೆ ಸರ್ಕಾರವು ಅಧಿಸೂಚನೆ ಹೊರಡಿಸುವ ಕುರಿತಂತೆ ರಾಜ್ಯಪಾಲರೇ ನೇರವಾಗಿ ಮನವಿ ಪತ್ರ ಸ್ವೀಕರಿಸಬೇಕೆಂದು ಆಗ್ರಹಿಸಿ ಮಹದಾಯಿ ಹೋರಾಟಗಾರರ ಅಹೋರಾತ್ರಿ ಹೋರಾಟ ಎರಡನೇ ದಿನವೂ ಮುಂದುವರಿದಿದೆ.
ಮಳೆಯಲ್ಲೇ ಧರಣಿ ಮುಂದುವರಿಸಿದ ಮಹದಾಯಿ ಹೋರಾಟಗಾರರು - Mahadayi protest in Bangalore
ಭಾರಿ ಮಳೆ- ಹಾಗೂ ಚಳಿಗೆ ಕುಗ್ಗದೆ ರೈತರು ತಲೆಗೆ ಟಾರ್ಪೆಲ್ ಹಾಕಿಕೊಂಡು ಪ್ರತಿಭಟನೆಯನ್ನು ಮುಂದುವರಿಸಿ ತಮ್ಮ ಗಟ್ಟಿ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಭಾರಿ ಮಳೆ- ಹಾಗೂ ಚಳಿಗೆ ಕುಗ್ಗದೆ ರೈತರು ತಲೆಗೆ ಟಾರ್ಪೆಲ್ ಹಾಕಿ ಹೋರಾಟದ ಗಟ್ಟಿ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಎಷ್ಟೇ ದೊಡ್ಡ ಮಳೆ ಬಂದರೂ ನಾವು ಹೋರಾಟದಿಂದ ವಿಚಲಿತರಾಗುವುದಿಲ್ಲ. ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಮನವಿಯನ್ನು ಯಾಕೆ ರಾಜ್ಯಪಾಲರು ಸ್ವೀಕರಿಸುತ್ತಿಲ್ಲ.. ಎಂಬುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ಅನ್ನ ಬೆಳೆಯುವ ರೈತರು.. ನಾವು ಬಂದಿರೋದು ರೈತರ ಸಮಸ್ಯೆ ಆಲಿಸುವುದಕ್ಕೆ ಅಷ್ಟೇ. ಜನಪ್ರತಿನಿಧಿಗಳು ನಾವೂ ಇದ್ದೇವೆ ಎಂದು ಸ್ವಾಂತನ ಹೇಳುವ ಬದಲು ಸಮಸ್ಯೆ ಪರಿಹಾರ ಕಂಡುಕೊಳ್ಳಲಿ ಎಂದು ಹೋರಾಟ ನೇತೃತ್ವದ ವಹಿಸಿರುವ ವಿರೇಶ್ ಸೊಬರದಮಠ ಹೇಳಿದ್ದಾರೆ.