ಕರ್ನಾಟಕ

karnataka

ETV Bharat / state

ದುಬಾರಿ ಬೈಕು​ಗಳೇ ಇವರ ಟಾರ್ಗೆಟ್: ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆ - Madiwala police arrested bike thieves

ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ ಡ್ಯೂಕ್ ಹಾಗೂ ಬುಲೆಟ್ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Madiwala police arrested bike thieves
ಕದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

By

Published : Jan 2, 2020, 9:56 AM IST

ಬೆಂಗಳೂರು:ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ ಡ್ಯೂಕ್ ಹಾಗೂ ಬುಲೆಟ್ ಬೈಕ್​ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಕದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಮನೋಹರ್ ಹಾಗೂ ಲೋಗನಾಥನ್ ಬಂಧಿತ ಆರೋಪಿಗಳು.

ಇವರು ಮಡಿವಾಳ, ಕೋರಮಂಗಲ,ಬೊಮ್ಮನ ಹಳ್ಳಿ, ಆಡುಗೋಡಿ ಸುತ್ತಮುತ್ತ ಮನೆಯ ಮುಂದೆ ನಿಲ್ಲಿಸಿದ ಬೈಕು​ಗಳನ್ನು ರಾತ್ರಿ ವೇಳೆ ಎಗರಿಸಿ ಪರಾರಿಯಾಗ್ತಿದ್ರು‌. ನಂತರ ಲಕ್ಷಗಟ್ಟಲೆ ಬೆಲೆ ಬಾಳುವ ಬೈಕುಗಳನ್ನು ಹತ್ತಿಪ್ಪತ್ತು ಸಾವಿರ ರೂಗೆ ಮಾರಾಟ ಮಾಡಿ ಹಣ ಸಂಪಾದಿಸ್ತಿದ್ರು‌ ಎಂಬ ವಿಚಾರ ತನಿಖೆ ವೇಳೆ ಗೊತ್ತಾಗಿದೆ.

ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದರಿಂದ ಪೊಲೀಸರಿಗೆ ಆರೋಪಿಯನ್ನು ಹಿಡಿಯಲು ಸಹಾಯಕವಾಗಿದೆ. ಅಂದಾಜು 20 ಲಕ್ಷ ರೂ ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details