ಬೆಂಗಳೂರು :ಕಳೆದ 5 ದಿನಗಳಿಂದ ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು ಇಂದು ಯಲಹಂಕದ ರೆಸಾರ್ಟ್‌ಗೆ ಬಂದಿಳಿದಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು ರಮಡಾ ರೆಸಾರ್ಟ್‌ಗೆ ಶಿಫ್ಟ್..
ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್‌ನಲ್ಲಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ಬಂಡಾಯ ಶಾಸಕರು ಇಂದು ರಾತ್ರಿ ರಮಡಾ ರೆಸಾರ್ಟ್‌ಗೆ ಶಿಫ್ಟ್ ಆಗಿದ್ದಾರೆ.
ಯಲಹಂಕದ ಹೊನ್ನೇನಹಳ್ಳಿ ಬಳಿಯ ರಮಡಾ ರೆಸಾರ್ಟ್‌ಗೆ ಇಂದು ರಾತ್ರಿ ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿ 10 ಕಾರಿನಲ್ಲಿ 19 ಶಾಸಕರು ಬಂದಿಳಿದಿದ್ದಾರೆ. ರಮಡಾ ರೆಸಾರ್ಟ್‌ನಲ್ಲಿ 15ದಿನಗಳ ಕಾಲ ವಾಸ್ತವ್ಯ ಹೂಡಲು 45 ರೂಮ್‌ಗಳನ್ನು ಬುಕ್ ಮಾಡಲಾಗಿದೆ. ಜೊತೆಗೆ ರೆಸಾರ್ಟ್ ಸುತ್ತಮುತ್ತ ಬೆಂ.ಗ್ರಾ. ಡಿವೈಎಸ್ಪಿ, ಇನ್ಸ್‌ಪೆಕ್ಟರ್ ಸೇರಿದಂತೆ ಪೊಲೀಸರ ಸರ್ಪಗಾವಲಿನಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ದೇವನಹಳ್ಳಿಯ ಕುಡಕುರ್ಕಿ ಬಳಿಯ ಗಾಲ್ಫ್ ಶೈನ್ ರೆಸಾರ್ಟ್‌ನಲ್ಲಿ ಕಳೆದ 5 ದಿನಗಳಿಂದ ವಾಸ್ತವ್ಯ ಹೂಡಿದ್ದ ಬಂಡಾಯ ಶಾಸಕರನ್ನು ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಜೀತು ಪಟ್ವಾರಿ, ಕೆಪಿಸಿಸಿ ವಕ್ತಾರ ಉಗ್ರಪ್ಪ ಭೇಟಿ ಮಾಡಲು ಮುಂದಾಗಿದ್ರಿಂದ ಹೈಡ್ರಾಮಾ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ 19 ಶಾಸಕರು ರಮಡಾ ರೆಸಾರ್ಟ್‌ಗೆ ವಾಸ್ತವ್ಯ ಬದಲಿಸಿದ್ದಾರೆ.