ಬೆಂಗಳೂರು:ಅತೃಪ್ತ ಶಾಸಕರಿಗೆ ಸುಪ್ರೀಂ ಕೋರ್ಟ್ ರಕ್ಷಣೆ ಇದ್ದರೂ ಅನರ್ಹಗೊಳಿಸುವ ಮೂಲಕ ಸ್ಪೀಕರ್ ರಮೇಶ್ ಕುಮಾರ್ ಸರ್ವೋಚ್ಚ ನ್ಯಾಯಾಲಯಕ್ಕೆ ಅವಹೇಳನ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಮಾಧುಸ್ವಾಮಿ ಅಸಮಾಧಾನ - ಸ್ಪೀಕರ್ ರಮೇಶ್ ಕುಮಾರ್
ಇಂದು ಸ್ಪೀಕರ್ ರಮೇಶ್ ಕುಮಾರ್ ಅವರು 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ್ದು, ಇದರಿಂದ ನಾಳೆ ಯಡಿಯೂರಪ್ಪನವರ ವಿಶ್ವಾಸಮತ ಯಾಚನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಶಾಸಕರಿಗೆ ಸುಪ್ರೀಂ ಕೋರ್ಟ್ ರಕ್ಷಣೆ ಇದ್ದರೂ ಅನರ್ಹಗೊಳಿಸುವ ಮೂಲಕ ಸ್ಪೀಕರ್ ರಮೇಶ್ ಕುಮಾರ್ ಸರ್ವೋಚ್ಚ ನ್ಯಾಯಾಲಯಕ್ಕೆ ಅವಹೇಳನ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಶಾಸಕಾಂಗ ಸಭೆಗೂ ಮುನ್ನ ಮಾಧುಸ್ವಾಮಿ ಮಾತನಾಡಿ, ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕರನ್ನು ಅನರ್ಹ ಮಾಡಿರುವುದರಿಂದ ನಾಳೆಯ ವಿಶ್ವಾಸಮತ ಯಾಚನೆಯ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಶಾಕರ ರಾಜೀನಾಮೆಯನ್ನು ಅಂಗೀಕಾರ ಮಾಡಿದ್ರೆ, ಅನರ್ಹಗೊಳಸಿದ್ರೆ ಅಥವಾ ಅನರ್ಹಗೊಳಿಸದೆ ಇದ್ದರೂ ಅವರು ನಾಳೆ ವಾಪಸ್ ಬರುವುದಕ್ಕೆ ತಯಾರಿರಲಿಲ್ಲ. ದುರದೃಷ್ಟವಶಾತ್ ಸ್ಪೀಕರ್ ಈ ರೀತಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.
ಅತೃಪ್ತ ಶಾಸಕರ ಮೇಲೆ ಯಾವುದೇ ಒತ್ತಡ ಹೇರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಕೂಡ ಸ್ಪೀಕರ್ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಇದು ಸುಪ್ರೀಂ ಕೋರ್ಟಿಗೆ ಮಾಡಿದ ಅವಹೇಳನ ಎಂದು ಭಾವಿಸುತ್ತೇವೆ. ಸುಪ್ರೀಂ ಕೋರ್ಟ್ ಶಾಸಕರಿಗೆ ಈಗಾಗಲೇ ರಕ್ಷಣೆ ಕೊಟ್ಟಿರುವುದರಿಂದ ಅನರ್ಹಗೊಂಡಿರುವ ಶಾಸಕರಿಗೆ ಏನೂ ಆಗುವುದಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ಅನರ್ಹ ಶಾಸಕರಿಗೆ ನ್ಯಾಯ ಸಿಗಲಿದೆ ಎಂದರು.