ಕರ್ನಾಟಕ

karnataka

ETV Bharat / state

ಜೈಲಿಂದ ಹೊರ ಬರುವಾಗ ಉತ್ಸವ ಮಾಡುವುದನ್ನು ಹುಡುಗರೂ ಪ್ರಶ್ನಿಸುವಂತಾಗಿದೆ: ಡಿಕೆಶಿಗೆ ಮಾಧುಸ್ವಾಮಿ ವ್ಯಂಗ್ಯ - ವಿಧಾನಸಭೆ ಅಧಿವೇಶನ

ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಗೆ ಉತ್ತರ ನೀಡುವ ಮುನ್ನ ಕಾನೂನು ಸಚಿವ ಮಾಧುಸ್ವಾಮಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು. ಒಬ್ಬ ಹುಡುಗ 'ಜೈಲಿಂದ ಹೊರ ಬರುವಾಗ ಉತ್ಸವ ಏಕೆ ಮಾಡ್ತಾರೆ' ಎಂದು ನನಗೆ ಪ್ರಶ್ನಿಸಿದ್ದ ಎನ್ನುತ್ತಾ, ನಮಗೆ ನಿಮ್ಮ ಎಲ್ಲಾ ಆಟಗಳೂ ನಮಗೆ ಗೊತ್ತಿದೆ ಎಂದು ಡಿಕೆಶಿಗೆ ವ್ಯಂಗ್ಯವಾಡಿದರು.

madhuswamy
ಮಾಧುಸ್ವಾಮಿ

By

Published : Sep 27, 2020, 2:26 AM IST

Updated : Sep 27, 2020, 5:54 AM IST

ಬೆಂಗಳೂರು:ಜೈಲಿಂದ‌ ಹೊರ ಬರುವಾಗ ಏಕೆ ಉತ್ಸವ ಮಾಡುತ್ತಾರೆ ಎಂದು ನನ್ನನ್ನು ಹುಡುಗನೊಬ್ಬ ಪ್ರಶ್ನಿಸಿದ್ದ ಎಂದು ಕಾನೂನು ಸಚಿವ ಮಾಧುಸ್ವಾಮಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ವಿರುದ್ಧ ವ್ಯಂಗ್ಯವಾಡಿದರು.

ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಗೆ ಉತ್ತರ ನೀಡುವ ಮುನ್ನ ಕಾನೂನು ಸಚಿವ ಮಾಧುಸ್ವಾಮಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು. ಒಬ್ಬ ಹುಡುಗ 'ಜೈಲಿಂದ ಹೊರ ಬರುವಾಗ ಉತ್ಸವ ಏಕೆ ಮಾಡ್ತಾರೆ' ಎಂದು ನನಗೆ ಪ್ರಶ್ನಿಸಿದ್ದಾನೆ. ನಮಗೆ ನಿಮ್ಮ ಎಲ್ಲಾ ಆಟಗಳೂ ನಮಗೆ ಗೊತ್ತಿದೆ ಎಂದು ಅಣಕವಾಡಿದರು.

ನಾನೂ 1985ರಿಂದ ನಿಮ್ಮಂತೆ ರಾಜಕೀಯ ಜೀವನದಲ್ಲಿ ಇದ್ದೇನೆ. ನಿಮ್ಮ ತರಹ ನಾನು ಸೋಲು ಕಂಡಿದ್ದೇನೆ. ಆದರೆ, ನೀವು ಒಂದು ಬಾರಿ ಸೋತು ಬಳಿಕ ಏನೆಲ್ಲಾ ಮಾಡಿ ಗೆಲುವು ಸಾಧಿಸಿದ್ದೀರಿ, ನೀವು ಯಾವ ರೀತಿ ಗೆಲುವು ಪಡೆದಿದ್ದೀರಿ ಎಂಬುದು ನನಗೆ ಗೊತ್ತು. ನಾನು ನಿಮ್ಮ ತರಹ ಮಾಡಲು ಸಾಧ್ಯವಾಗಿಲ್ಲ.‌ ಹಾಗಾಗಿ ನಾನು ನಿಮ್ಮಷ್ಟು ವೇಗದಲ್ಲಿ ಬೆಳೆಯಲು ಸಾಧ್ಯವಾಗಿಲ್ಲ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.

ನೀವು ಯಾವ ರೀತಿ ಎತ್ತರ, ಎತ್ತರಕ್ಕೆ ಹೋಗಿದ್ದಿರೋ ಎಲ್ಲವೂ ನಮಗೆ ತಿಳಿದಿದೆ. ನಿಮ್ಮ ನವರಂಗಿ ಆಟವನ್ನೆಲ್ಲಾ ನಾನು ನೋಡಿದ್ದೇನೆ. ನಿಮ್ಮ ಎಲ್ಲಾ ಆಟಗಳನ್ನು ಕಂಡಿದ್ದೇನೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ‌ ನಡೆಸಿದರು.

Last Updated : Sep 27, 2020, 5:54 AM IST

ABOUT THE AUTHOR

...view details