ಕರ್ನಾಟಕ

karnataka

ETV Bharat / state

ಚೆಕ್​ ಬೌನ್ಸ್ ಕೇಸ್: ಸಚಿವ ಮಧು ಬಂಗಾರಪ್ಪಗೆ ತಾತ್ಕಾಲಿಕ ರಿಲೀಫ್

ಎರಡು ದಿನಗಳ ಹಿಂದೆ ಚೆಕ್ಸ್ ಬೌನ್ಸ್ ಪ್ರಕರಣದ ಹಿನ್ನೆಲೆಯಲ್ಲಿ 6 ತಿಂಗಳ ಬಂಧನದ ಆದೇಶಕ್ಕೆ ಈಗ ಸಚಿವ ಮಧು ಬಂಗಾರಪ್ಪಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

madhu bangarappa
madhu bangarappa

By ETV Bharat Karnataka Team

Published : Dec 31, 2023, 5:55 PM IST

ಬೆಂಗಳೂರು:ಚೆಕ್ ಬೌನ್ಸ್ ಪ್ರಕರಣದಲ್ಲಿ ದಂಡ ಪಾವತಿಸದಿದ್ದರೆ ಆರು ತಿಂಗಳು ಜೈಲು ಶಿಕ್ಷೆ ಆದೇಶ ಹಿನ್ನೆಲೆ ತೀರ್ಪು ಪ್ರಶ್ನಿಸಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ದಂಡದಲ್ಲಿ ಶೇ.20ರಷ್ಟು ಠೇವಣಿಯಿಡುವ ಷರತ್ತಿನೊಂದಿಗೆ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿದೆ. 50 ಸಾವಿರ ರೂ. ಬಾಂಡ್, ಒಬ್ಬರ ಶ್ಯೂರಿಟಿ ಒದಗಿಸಬೇಕು. ಒಂದು ತಿಂಗಳೊಳಗೆ ಷರತ್ತು ಪಾಲಿಸದಿದ್ದರೆ ಮಧ್ಯಂತರ ರಿಲೀಫ್ ರದ್ದಾಗಲಿದೆ ಎಂದು 56ನೇ ಸಿಟಿ ಸಿವಿಲ್ ನ್ಯಾಯಾಲಯ ಆದೇಶಿಸಿದೆ.

ಹಿಂದಿನ ಆದೇಶ:ಈ ಪ್ರಕರಣದ ಹಿನ್ನೆಲೆಯಲ್ಲಿ ಎರಡು ದಿನದ ಹಿಂದೆ ಅಂದರೆ ಡಿಸೆಂಬರ್​ 29 ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 6,96,70,000 ರೂ. ದಂಡ ಪಾವತಿಸದೇ ಇದ್ದರೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಸದ್ಯ ಒಟ್ಟು ದಂಡದ ಹಣದಲ್ಲಿ ಶೇ.20 ರಷ್ಟು ಹಣ ಠೇವಣಿ ಇಡಬೇಕು. ಷರತ್ತು ಪಾಲಿಸದಿದ್ದರೆ ಮಧ್ಯಂತರ ರಿಲೀಫ್ ರದ್ದಾಗಲಿದೆ ಎಂದು ಸೆಷನ್ಸ್ ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ:ಆಕಾಶ್ ಆಡಿಯೋ ಕಂಪೆನಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವೇಳೆ ಮಧು ಬಂಗಾರಪ್ಪ ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಗೆ 6.60 ಕೋಟಿ ಬಾಕಿ ಪಾವತಿಗೆ ಚೆಕ್ ನೀಡಿದ್ದರು. 2011ರಲ್ಲಿ ಮಧು ಬಂಗಾರಪ್ಪ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಇದರ ಬೆನ್ನಲ್ಲೇ ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆಯು ಮಧು ಬಂಗಾರಪ್ಪ ವಿರುದ್ಧ 6.60ಕೋಟಿ ರೂ. ಚೆಕ್ ಬೌನ್ಸ್ ಪ್ರಕರಣ ದಾಖಲಿಸಿತ್ತು.

ಮಧು ಬಂಗಾರಪ್ಪ ಅವರು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. 2023ರ ಜ.17ರಂದು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಧು ಬಂಗಾರಪ್ಪಗೆ ಜಾಮೀನು ನೀಡಿತ್ತು.

ಮುಚ್ಚಳಿಕೆಗೆ ನಿರಾಕರಿಸಿದ ಕೋರ್ಟ್​​:ಮಧು ಬಂಗಾರಪ್ಪ 6.60 ಕೋಟಿ ರೂ. ಮೊತ್ತದ ಪೈಕಿ 50 ಲಕ್ಷ ರೂ. ಮಾತ್ರ ಮರು ಪಾವತಿಸಿದ್ದರು. ಉಳಿದ ಮೊತ್ತವನ್ನು ಪಾವತಿ ಮಾಡಿರಲಿಲ್ಲ. ಈ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. 2024ರ ಜ.30ರೊಳಗಾಗಿ 6.10 ಕೋಟಿ ರೂ.ಪಾವತಿ ಮಾಡುವುದಾಗಿ ಮಧು ಬಂಗಾರಪ್ಪ ಮುಚ್ಚಳಿಕೆಯಲ್ಲಿ ಬರೆದುಕೊಟ್ಟಿದ್ದರು. ಈ ಹಿಂದೆ ಮಧು ಬಂಗಾರಪ್ಪ ಕೊಟ್ಟಿದ್ದ ಮುಚ್ಚಳಿಕೆ ಪಾಲಿಸದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಚ್ಚಳಿಕೆ ಒಪ್ಪಲು ನಿರಾಕರಿಸಿದೆ.

ಇದನ್ನೂ ಓದಿ:ಚೆಕ್​ಬೌನ್ಸ್: ಮಧು ಬಂಗಾರಪ್ಪ ದಂಡ ಪಾವತಿಸದಿದ್ದರೆ 6 ತಿಂಗಳು ಜೈಲು ಶಿಕ್ಷೆಗೆ ಆದೇಶ

ABOUT THE AUTHOR

...view details