ಬೆಂಗಳೂರು : ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸುತ್ತಿರುವುದಕ್ಕಾಗಿ ಏಳು ಜನ ಬಿಜೆಪಿ ಶಾಸಕರು ಫುಲ್ ಖುಷ್ ಆಗಿದ್ದರೆ, ಇತ್ತ ಸಚಿವ ಸ್ಥಾನ ವಂಚಿತರು ಹಾಗೂ ಮೂಲ ಬಿಜೆಪಿ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬೇಸರ ಹೊರಹಾಕಿದ್ದಾರೆ.
ಯಾವ ಮಾನದಂಡಗಳ ಮೇಲೆ ಸಚಿವರನ್ನ ಆಯ್ಕೆ ಮಾಡಿದ್ರಿ : ಸಿಎಂಗೆ ಶಾಸಕ ಸತೀಶ್ ರೆಡ್ಡಿ ಪ್ರಶ್ನೆ - ಬಿಜೆಪಿ ಶಾಸಕ ಎಂ ಸತೀಶ್ ರೆಡ್ಡಿ ಸಚಿವ ಸಂಪುಟ ಕುರಿತು ಟ್ವೀಟ್
ಸಂಪುಟದಲ್ಲಿ ಸಚಿವ ಸ್ಥಾನ ನೀಡದಿದ್ದಕ್ಕೆ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಎಂ ಸತೀಶ್ ರೆಡ್ಡಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಶಾಸಕ ಎಂ ಸತೀಶ್ ರೆಡ್ಡಿ ಆಕ್ರೋಶ
ಈ ಕುರಿತು ಟ್ವೀಟ್ ಮಾಡಿರುವ ಬೊಮ್ಮನಹಳ್ಳಿ ಶಾಸಕ ಎಂ ಸತೀಶ್ ರೆಡ್ಡಿ, 'ಯಡಿಯೂರಪ್ಪನವರೇ ಮಂತ್ರಿಮಂಡಲ ವಿಸ್ತರಣೆಯಲ್ಲಿ ಸಚಿವರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ನಿಮಗೆ, ನಮ್ಮ ರಾಜ್ಯ ಮತ್ತು ರಾಷ್ಟ್ರದ ನಾಯಕರುಗಳಿಗೆ ನಿಷ್ಟಾವಂತ ಯುವ ಕಾರ್ಯಕರ್ತರು ಕಾಣುತ್ತಿಲ್ಲವೆ? ನಮ್ಮ ಕಷ್ಟ ನಷ್ಟಗಳನ್ನು ಆಲಿಸುತ್ತಿದ್ದ ಶ್ರೀ ಅನಂತಕುಮಾರ್ ಜಿ ರವರ ಇಲ್ಲದಿರುವಿಕೆ ಎದ್ದು ಕಾಣುತ್ತಿದೆ' ಎಂದಿದ್ದಾರೆ.
ಓದಿ : ಸಚಿವ ನಾಗೇಶ್ಗೆ ಕೋಕ್.. ಬಿಎಸ್ವೈ ಸಂಪುಟ ಸೇರಿದ ಸಪ್ತ ಸಚಿವರು..