ಬೆಂಗಳೂರು: ಬಿಬಿಎಂಪಿಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಹೆಸರು ಗಳಿಸಿದ್ದ, ಎರಡು ಬಾರಿ ಪಾಲಿಕೆ ಸದಸ್ಯರಾಗಿದ್ದ ಮಾಜಿ ಕಾರ್ಪೋರೇಟರ್ ಎಂ.ನಾಗರಾಜ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
2 ಬಾರಿ ಬಿಬಿಎಂಪಿ ಸದಸ್ಯರಾಗಿದ್ದ ಎಂ.ನಾಗರಾಜ್ ಕೊರೊನಾಗೆ ಬಲಿ - ಎಂ. ನಾಗರಾಜ್ ಡೆತ್ ನ್ಯೂಸ್
ಮಾಜಿ ಕಾರ್ಪೋರೇಟರ್ ಎಂ.ನಾಗರಾಜ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಎಂ. ನಾಗರಾಜ್ ಕೊರೊನಾ ಸೋಂಕಿಗೆ ಬಲಿ
ಉಸಿರಾಟದ ಸಮಸ್ಯೆಯಿಂದ ನಗರದ ಮಲ್ಲಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಎರಡು ದಿನದಿಂದ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಇಂದು ಬೆಳಗ್ಗೆ 2.45ರ ವೇಳೆಗೆ ಮೃತಪಟ್ಟಿದ್ದಾರೆ.
ಬಿಜೆಪಿ ಪಾಲಿಕೆ ಸದಸ್ಯರಾಗಿದ್ದ ಎಂ.ನಾಗರಾಜ್, ಕುರುಬರಹಳ್ಳಿ ಹಾಗೂ ನಂದಿನಿ ಲೇಔಟ್ ವಾರ್ಡ್ನಿಂದ 2001 ಹಾಗೂ 2010ರಲ್ಲಿ ಪಾಲಿಕೆ ಸದಸ್ಯರಾಗಿದ್ದರು. ಈ ವೇಳೆ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದರು. ಅವರ ಪತ್ನಿಯೂ ಒಂದು ಬಾರಿ ಕೌನ್ಸಿಲರ್ ಆಗಿದ್ದರು.
Last Updated : Sep 18, 2020, 9:45 AM IST