ಕರ್ನಾಟಕ

karnataka

ETV Bharat / state

ಉಪಸಭಾಧ್ಯಕ್ಷರನ್ನು ಬದಲಿಸದ ಬಿಜೆಪಿ ಸರ್ಕಾರ! ಸ್ಥಾನದಲ್ಲಿ ಮುಂದುವರೆದ ಎಂ.ಕೃಷ್ಣಾರೆಡ್ಡಿ - ಜೆಡಿಎಸ್​ನ ಹಿರಿಯ ಶಾಸಕ ಎಂ.ಕೃಷ್ಣಾ ರೆಡ್ಡಿ

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಧಿಕಾರ ಹಿಡಿದಿದ್ದ, ನಿರ್ದೇಶಕರು, ಮಂಡಳಿ ಅಧ್ಯಕ್ಷರುಗಳನ್ನು ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಕೆಳಗಿಳಿಸಲಾಗಿತ್ತು. ಆದರೆ, ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಮಾತ್ರ ಇನ್ನೂ ಅದೇ ಸ್ಥಾನದಲ್ಲಿ ಮುಂದುವರೆಸಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ

By

Published : Oct 10, 2019, 4:13 PM IST

Updated : Oct 10, 2019, 4:45 PM IST

ಬೆಂಗಳೂರು: ಬಿಜೆಪಿಯು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುತ್ತಿದ್ದಂತೆ, ಮೈತ್ರಿ ಸರ್ಕಾರದ ಅವಧಿಯಲ್ಲಿ ಆಯಕಟ್ಟಿನ ಜಾಗದಲ್ಲಿದ್ದ ಎಲ್ಲ ಪ್ರಮುಖ ಸ್ಥಾನಗಳನ್ನು ತಕ್ಷಣವೇ ರದ್ದುಪಡಿಸಿ, ತಮ್ಮವರನ್ನು ಕೂರಿಸಿತ್ತು. ಆದರೆ, ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಆಗಿರುವ ಜೆಡಿಎಸ್​ನ ಹಿರಿಯ ಶಾಸಕ ಎಂ.ಕೃಷ್ಣಾ ರೆಡ್ಡಿ ಬದಲಾವಣೆ ಮಾಡುವುದನ್ನು ಮರೆತುಬಿಟ್ಟಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾದರೂ ವಿಧಾನಸಭೆ ಉಪಸಭಾಧ್ಯಕ್ಷರ ಬದಲಾವಣೆ ಬಗ್ಗೆ ಮುಖ್ಯಮಂತ್ರಿಗಳಾಗಲಿ, ವಿಧಾನಸಭೆ ಸ್ಪೀಕರ್ ಆಗಲಿ ತಲೆಕೆಡಿಸಿಕೊಂಡಂತಿಲ್ಲ.

ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ

ವಿಧಾನಸಭೆಯಲ್ಲಿ ಸಂಖ್ಯಾಬಲದ ಪ್ರಕಾರ, ಸ್ಪೀಕರ್ ಮತ್ತು ಡೆಪ್ಯುಟಿ ಸ್ಪೀಕರ್ ಎರಡೂ ಪ್ರಮುಖ ಹುದ್ದೆಗಳು ಬಿಜೆಪಿಗೆ ಸುಲಭವಾಗಿ ಲಭ್ಯವಾಗಿದೆ. ಮೈತ್ರಿ ಪಕ್ಷಗಳ ಶಾಸಕರ ಆಪರೇಶನ್, ಶಾಸಕರ ಅನರ್ಹತೆ, ಸಚಿವ ಸಂಪುಟ ವಿಸ್ತರಣೆ, ಖಾತೆಗಳ ಹಂಚಿಕೆ, ಪ್ರವಾಹ ಮತ್ತು ನೆರೆ ಹಾವಳಿ ಸೇರಿದಂತೆ ಹಲವಾರು ವಿದ್ಯಮಾನಗಳನ್ನು ನಿಭಾಯಿಸುವುದರಲ್ಲೇ ಸುಸ್ತಾದಂತೆ ಕಾಣುತ್ತಿದೆ.

ಇದರಿಂದ ವಿರೋಧಿ ಪಕ್ಷದ ಶಾಸಕರೆ ಮುಂದುವರಿದಿರುವುದು ಆಶ್ಚರ್ಯ ಹುಟ್ಟಿಸಿದೆ. ಸರ್ಕಾರ ಬದಲಾವಣೆಯಾದ ನಂತರ ಸ್ವಪ್ರೇರಣೆಯಿಂದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ವಿಧಾನಸಭೆ ಉಪಾಧ್ಯಕ್ಷರಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಜೆಡಿಎಸ್ ಶಾಸಕ ಎಂ.ಕೃಷ್ಣಾರೆಡ್ಡಿ ಬಿಜೆಪಿಯ ಮರೆವನ್ನೇ ಲಾಭ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಶಾಸಕರಾದ ಎಸ್.ಅಂಗಾರ, ಜಿ.ಹೆಚ್.ತಿಪ್ಪಾರೆಡ್ಡಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಸೇರಿದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಹಲವರು ವಿಧಾನಸಭೆ ಉಪಾಧ್ಯಕ್ಷರ ಸೀಟಿನ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ, ನಿಗಮ ಮಂಡಳಿಗಳ ಅಧ್ಯಕ್ಷರು, ನಿರ್ದೇಶಕರುಗಳನ್ನು ಸಿಎಂ ಯಡಿಯೂರಪ್ಪ ಕೆಳಗಿಳಿಸಿದ್ದರು. ಹಿರಿಯ ಅಧಿಕಾರಿಗಳ ಬದಲಾವಣೆ ಸಹ ಮಾಡಲಾಗಿದೆ.

Last Updated : Oct 10, 2019, 4:45 PM IST

ABOUT THE AUTHOR

...view details