ಕರ್ನಾಟಕ

karnataka

ETV Bharat / state

ನೀರಾವರಿ ಯೋಜನೆಗಳ ಬಗ್ಗೆ ತನಿಖೆ ವಿಚಾರವಾಗಿ ಸತ್ಯಾಸತ್ಯತೆ ತಿಳಿಯದೆ ಮಾತನಾಡೊದಿಲ್ಲ: ಎಂಬಿಪಿ - ನೆರೆ ಸಂತ್ರಸ್ತರು

ಮೊದಲು ನೆರೆ ಸಂತ್ರಸ್ತರ ಬಗ್ಗೆ ಗಮನಹರಿಸಿ. ಆ ನಂತರ ಟ್ಯಾಪಿಂಗ್ ಈ ಅಕ್ರಮ. ಅನ್ನೋದನ್ನ ಮಾತನಾಡಿ ಎಂದು ಬಿಜೆಪಿ ಸರ್ಕಾರಕ್ಕೆ ಟಾಂಗ್ ಕೊಟ್ಟ ಮಾಜಿ ಸಚಿವ ಎಂ.ಬಿ ಪಾಟೀಲ್.

ನೀರಾವರಿ ಯೋಜನೆಗಳ ಬಗ್ಗೆ ತನಿಖೆ ವಿಚಾರವಾಗಿ ಸತ್ಯಾಸತ್ಯತೆ ತಿಳಿಯದೆ ಮಾತನಾಡೊದಿಲ್ಲ: ಎಂಬಿಪಿ

By

Published : Sep 16, 2019, 6:01 PM IST

ಬೆಂಗಳೂರು:ನೀರಾವರಿ ಯೋಜನೆಗಳ ಬಗ್ಗೆ ತನಿಖೆ ವಿಚಾರವಾಗಿ ಸತ್ಯಾಸತ್ಯತೆ ತಿಳಿಯದೆ ಮಾತನಾಡೊದಿಲ್ಲ. ತಾಂತ್ರಿಕ ಉಪಸಮಿತಿ ಇರತ್ತೆ, ಅಲ್ಲಿಂದ ಬೋರ್ಡ್​ಗೆ ಬರುತ್ತೆ ಎಂದು ಮಾಜಿ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬೋರ್ಡ್​ಗೆ ಸಿಎಂ ಅಧ್ಯಕ್ಷರಾಗಿರ್ತಾರೆ. ಸತ್ಯಾಸತ್ಯತೆ ತಿಳಿಯದೇ ಸ್ಟಡಿ ಮಾಡದೆಯೇ ಮಾತನಾಡೋದು ತಪ್ಪಾಗುತ್ತದೆ. ನನ್ನ ಅವಧಿಯಲ್ಲಿ ಇಂಥದ್ದಕ್ಕೆ ಯಾವುದೇ ಅವಕಾಶ ಕೊಟ್ಟಿಲ್ಲ. ನಮ್ಮ ಐದು ವರ್ಷದ ಅವಧಿಗೆ ಬೇಕಾದ್ದು ತೆಗೆಯಲಿ, ನಾನೇ ಗೈಡ್ ಮಾಡ್ತೇನೆ. ಏನೇ ತೆಗೆದು ನೋಡಿದ್ರೂ ಸ್ವಾಗತ ಮಾಡ್ತೇನೆ. ನನ್ನ ಯಡಿಯೂರಪ್ಪ ಯಾಕೆ ಟಾರ್ಗೆಟ್ ಮಾಡ್ತಾರೆ, ನನ್ನ ಮೇಲೆ ದ್ವೇಷ ಏನಿದೆ ಅವರಿಗೆ? ಎಂದರು.

ನೀರಾವರಿ ಯೋಜನೆಗಳ ಬಗ್ಗೆ ತನಿಖೆ ವಿಚಾರವಾಗಿ ಸತ್ಯಾಸತ್ಯತೆ ತಿಳಿಯದೆ ಮಾತನಾಡೊದಿಲ್ಲ: ಎಂಬಿಪಿ

ಈ ಸರ್ಕಾರ ಗೊತ್ತು ಗುರಿ ಇಲ್ಲದ ಸರ್ಕಾರ. ಪ್ರವಾಹಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಏನು ಕೇಳಿದ್ರು ₹10 ಸಾವಿರ ಕೊಡೋದ್ರಲ್ಲೇ ಸರ್ಕಾರ ಇದೆ. ಸಂತ್ರಸ್ತರ ಬದುಕನ್ನು ಕಟ್ಟಿಕೊಡುವ ಕೆಲಸ ಆಗಬೇಕಿದೆ. ತಾತ್ಕಾಲಿಕ ಶೆಡ್​ಗಳನ್ನೂ ಇನ್ನೂ ನಿರ್ಮಿಸಿಲ್ಲ. ಡೈವರ್ಟ್ ಮಾಡಲು ಫೋನ್ ಟ್ಯಾಪಿಂಗ್, ಐಟಿ, ಇಡಿ ಅದು ಇದು ಅಂತಿದ್ದಾರೆ. ಸಂತ್ರಸ್ತರ ಬಾಳನ್ನು ಕಟ್ಟಿಕೊಡೋರು ಯಾರು? ಅಭಿವೃದ್ದಿ ಯೋಜನೆಗಳನ್ನು ಮುಂದೂಡಿ, ಸಂತ್ರಸ್ತರ ಬೆನ್ನಿಗೆ ನಿಲ್ಲಿ 1ವರ್ಷ ಮುಂದೂಡಿದ್ರೆ ಏನೂ ಆಗಲ್ಲ. ನಾನಾಗಿದ್ರೆ ಸಂತ್ರಸ್ತರ ಬದುಕನ್ನ ಕಟ್ಟಿಕೊಡುತ್ತಿದ್ದೆ. ಸಂತ್ರಸ್ತರಿಗೆ ₹10 ಸಾವಿರ ಕೊಟ್ಟಿದ್ದೇ ಜಾಸ್ತಿ ಅಂತ ಈಶ್ವರಪ್ಪ ಹೇಳಿದ್ದಾರೆ. ಹಿರಿಯ ರಾಜಕಾರಣಿಯೊಬ್ಬರು ಈ ರೀತಿ ಹೇಳ್ತಾರೆ ಎಂದರು.

ಉತ್ತರ ಕರ್ನಾಟಕ ಪ್ರವಾಹದ ಬಗ್ಗೆ ಯಾರೂ ಮಾತನಾಡ್ತಿಲ್ಲ. ಊಟಕ್ಕಿಲ್ಲದೆ ಜನ ಪರದಾಡ್ತಿದ್ದಾರೆ. ಮತ್ತಿಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನ ಬೀದಿಗೆ ಬಿದ್ದು ನಲುಗುತ್ತಿದ್ದಾರೆ. ತಾತ್ಕಾಲಿಕ ಶೆಡ್ ಹಾಕಿಕೊಟ್ಟಿಲ್ಲ. ದವಸ ಧಾನ್ಯ, ಹೊದಿಯೋ ಬೆಡ್ ಶೀಟ್ ಎಲ್ಲವೂ ಆಗಿಲ್ಲ. ಅದರ ಬಗ್ಗೆ ಸರ್ಕಾರ ಗಮನಿಸುತ್ತಿಲ್ಲ. ಸರ್ವಪಕ್ಷ ನಿಯೋಗ ಬೇಡ ಅಂತ ಡಿಸಿಎಂ ಲಕ್ಷ್ಮಣ್ ಸವದಿ ಹೇಳ್ತಾರೆ. ಮಾಧುಸ್ವಾಮಿ ₹ 11 ಕೋಟಿ ಪರಿಹಾರ ದೊಡ್ಡದು ಅಂತಾರೆ. ಈಶ್ವರಪ್ಪ ₹ 10 ಸಾವಿರವೇ ದೊಡ್ಡದು ಅಂತಾರೆ. ಇದೆಲ್ಲವೂ ಸಚಿವರು ಹೇಳೋ ಮಾತೇ? ಮೊದಲು ನೆರೆ ಸಂತ್ರಸ್ತರ ಬಗ್ಗೆ ಗಮನಹರಿಸಿ. ಆ ಮೇಲೆ ಆ ಟ್ಯಾಪಿಂಗ್ ಈ ಅಕ್ರಮ. ಅನ್ನೋದನ್ನ ಮಾತನಾಡಿ ಎಂದು ಟಾಂಗ್ ಕೊಟ್ಟರು.

ಪಕ್ಷಕ್ಕೆ ಗುರುತಿಸುವುದು ತಪ್ಪು:

ಸಂತ್ರಸ್ತರನ್ನ ಒಂದು ಪಕ್ಷಕ್ಕೆ ಗುರ್ತಿಸುವುದು ತಪ್ಪು. ಸಂತ್ರಸ್ತರಿಗೆ ಯಾವುದೇ ಪಾರ್ಟಿ ಪಕ್ಷ ಎಂಬುದಿಲ್ಲ. ರಾಜಕೀಯ ಬಿಟ್ಟು ಮೊದಲು ಸಂತ್ರತ್ರದ ಪರಿಹಾರಕ್ಕೆ ಮುಂದಾಗಿದೆ. ಆ ತನಿಖೆ ಈ ತನಿಖೆ ಅನ್ನೋದನ್ನ ಬಿಡಿ. ಅದಕ್ಕೂ ಮೊದಲು ಜನ ನಿಮ್ಮನ್ನೇ ತೆಗಿತಾರೆ. ಸರ್ಕಾರ ಪತನವಾಗಲಿದೆ ಎಂಬ ಭವಿಷ್ಯ ನುಡಿದರು.

ಅನರ್ಹರ ಪಾಡು:

ಅನರ್ಹ ಶಾಸಕರ ಪರಿಸ್ಥಿತಿಯಂತೂ ಕೇಳೋದೇ ಬೇಡ. ಆ ಕಡೆ ಹಳ್ಳವೂ ಇಲ್ಲ ದಡವೂ ಇಲ್ಲ ಅಂತ ಅನರ್ಹರು ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಮಾಡಿದ್ದುಣ್ಣೋ ಮಹರಾಯ. ಈ ಸರ್ಕಾರದ ಸ್ಥಿತಿ ನೋಡಿದರೆ 2020 ರ ಹೊತ್ತಿಗೆ ಚುನಾವಣೆ ಆದರೂ ಆಶ್ಚರ್ಯ ಇಲ್ಲ ಎಂದರು.

ಬೆಳಗಾವಿ ಅಧಿವೇಶನಕ್ಕೆ ಹಿಂದೇಟು:

ಬೆಳಗಾವಿ ಅಧಿವೇಶ ನಡೆಸೋಕೆ ಹಿಂದೇಟು ಹಾಕುತ್ತಿದ್ದಾರೆ. ಹೆದರಿಕೊಂಡು ಅಲ್ಲಿ ಅಧಿವೇಶನ ನಡೆಸುತ್ತಿಲ್ಲವೆನ್ನಿಸುತ್ತಿದೆ. ಯಾಕಂದ್ರೆ ನೆರೆ ಸಂತ್ರಸ್ತರ ಅಹವಾಲು ಎದುರಿಸಬೇಕಾಗುತ್ತದೆ. ಹೀಗಾಗಿ ಭಯದಿಂದ ನಡೆಸೋಕೆ ಹಿಂದೇಟು ಹಾಕ್ತಿರಬಹುದು. ಬೆಳಗಾವಿ ಅಧಿವೇಶನ ಹಿಂದೇಟಿಗೆ ಭಯವೇ ಕಾರಣ ಎಂದು ಸರ್ಕಾರವನ್ನ ಲೇವಡಿ ಮಾಡಿದರು.

ವರ್ಗಾವಣೆ ದಂಧೆ ಬಗ್ಗೆಯೂ ಒಂದು ತನಿಖೆ ನಡೆಯಲಿ ಎಂದ ಅವರು, ನನ್ನ ಮೇಲೆ ಯಡಿಯೂರಪ್ಪಗೆ ಯಾವುದೇ ದ್ವೇಷವಿಲ್ಲ. ಯಡಿಯೂರಪ್ಪಗೆ ನನ್ನ ಮೇಲೆ
ಅಂತ ಅಭಿಪ್ರಾಯವಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ನಮ್ಮ ಅಸ್ಮಿತೆ. ಈಗ ಅದರ ಬಗ್ಗೆ ಮಾತನಾಡುವುದು ಬೇಡ. ಮೊದಲು ನೆರೆ ಸಂತ್ರಸ್ತರ ಬಗ್ಗೆ ಮಾತನಾಡೋಣ. ಇನ್ನೂ ಸಾಕಷ್ಟು ಸಮಯವಿದೆ. ಮುಂದೆ ನೋಡೋಣ ಅದರ ಬಗ್ಗೆ ಯೋಚಿಸೋಣ ಎಂದರು.

ರಮೇಶ್ ಜಾರಕಿಹೊಳಿ ಸೀರಿಯಸ್ ರಾಜಕಾರಣಿ ಅಲ್ಲ:

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೀರಿಯಸ್ ರಾಜಕಾರಣಿ ಯಲ್ಲ. ಅವರು ಯಾಕೆ ಮಾಡ್ತಿದ್ದೇನೆ, ಏನು ಮಾಡ್ತಿದ್ದೇನೆ ಅನ್ನೋದು ಗೊತ್ತಿಲ್ಲ. ಅವರಿಗೆ ಅದು ತಿಳಿದಿರಲ್ಲ. ನಾನು ರಮೇಶ್ ಜಾರಕಿಹೊಳಿ ಗುಡ್ ಫ್ರೆಂಡ್ಸ್. ಪ್ರವಾಹ ಪರಿಶೀಲನೆ ವೇಳೆ ನಾವು ಹೋಗಿದ್ದೆವು. ಲಖನ್, ಸತೀಶ್ ಕೂಡ ಇದ್ದರು. ಇದಕ್ಕೆ ರಾಜಕಾರಣ ಬೆರೆಸಿದ್ದಾರೆ. ರಮೇಶ್ ಜಾರಕಿಹೊಳಿ ಅದನ್ನೇ ತಪ್ಪಾಗಿ ತಿಳಿದರಬಹುದು ಎಂದು ರಮೇಶ್ ಜಾರಕಿಹೊಳಿ ಆರೋಪಕ್ಕೆ ಎಂಬಿಪಿ ಪ್ರತಿಕ್ರಿಯೆ ನೀಡಿದರು.

ABOUT THE AUTHOR

...view details