ಬೆಂಗಳೂರು :ಮಾಜಿ ಗೃಹ ಸಚಿವರಾದ ಎಂ ಬಿ ಪಾಟೀಲ್ ಈ ಬಾರಿ ವಿಶಿಷ್ಟ ರೀತಿಯಲ್ಲಿ ರಕ್ಷಾ ಬಂಧನ ಆಚರಿಸಿ ಗಮನ ಸೆಳೆದಿದ್ದಾರೆ. ರಕ್ಷಾ ಬಂಧನ ಸೋದರತೆಯನ್ನು ಸಾರುವ ಸಂಭ್ರಮದ ಆಚರಣೆ. ಸಾಮಾನ್ಯವಾಗಿ ಅಣ್ಣ-ತಂಗಿಯರ ಸಂಬಂಧವನ್ನು ಇನ್ನಷ್ಟು ಬಿಗಿಯಾಗಿ ಬೆಸೆಯುವ ಆಚರಣೆಯಾಗಿ ಗುರುತಿಸಿಕೊಂಡಿದೆ.
ಪರಿಸರಕ್ಕೂ, ಮನುಷ್ಯನಿಗೂ ಇದೇ ರೀತಿಯ ಸೋದರತೆ, ಬಾಂಧವ್ಯ ಏರ್ಪಟ್ಟರೆ ಅದಕ್ಕಿಂತ ಉತ್ತಮ ಕಾರ್ಯ ಇನ್ನೊಂದಿಲ್ಲ. ಇದನ್ನು ಮನಗಂಡ ಪಾಟೀಲರು ಈ ಹಬ್ಬವನ್ನ ವಿಭಿನ್ನವಾಗಿ ಆಚರಿಸುವ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದಾರೆ.
ಕೋಟಿ ವೃಕ್ಷ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿ ಅರಣ್ಯ-ಪರಿಸರ ಕಾಳಜಿ ಮೆರೆದಿರುವ ಎಂ ಬಿ ಪಾಟೀಲ್ ಅವರು, ಈ ಬಾರಿ ಗಿಡ ಮರಗಳಿಗೂ ರಾಖಿ ಕಟ್ಟಿ ಅವುಗಳನ್ನೂ ರಕ್ಷಣೆ ಮಾಡಬೇಕು ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದ ಮೂಲಕ ಸಾರಿದ್ದಾರೆ.