ಬೆಂಗಳೂರು:ಉದ್ಯಮಿಯೊಬ್ಬರು ಜಾಲಿ ರೈಡ್ ಹೋಗಿದ್ದಾಗ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಅಪಘಾತಕ್ಕೀಡಾಗಿ, ಪುಡುಪುಡಿಯಾದ ಘಟನೆ ಜ್ಞಾನಭಾರತಿ ಯೂನಿವರ್ಸಿಟಿ ಸಮೀಪದ ನ್ಯಾಷನಲ್ ಲಾ ಕಾಲೇಜ್ ಬಳಿ ನಿನ್ನೆ ಸಂಜೆ ನಡೆದಿದೆ.
ಬೆಂಗಳೂರು: ಜಾಲಿ ರೈಡ್ ಹೋಗಿ ಲ್ಯಾಂಬೋರ್ಗಿನಿ ಕಾರು ಕಂಬಕ್ಕೆ ಗುದ್ದಿದ ಉದ್ಯಮಿ - Lamborghini car accident
ಜಾಲಿ ರೈಡ್ ಹೋಗಿದ್ದಾಗ ಉದ್ಯಮಿಗೆ ಸೇರಿದ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಅಪಘಾತಕ್ಕೀಡಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಲ್ಯಾಂಬೋರ್ಗಿನಿ ಕಾರು ಅಪಘಾತ
ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಗ್ಲೋಬಲ್ ಟೆಕ್ ಪಾರ್ಕ್ ಹೆಸರಿನಲ್ಲಿ ಕಾರು ನೋಂದಣಿಯಾಗಿದ್ದು, ಉದ್ಯಮಿ ಸಿದ್ದಾರ್ಥ್ ಕಾರು ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಪ್ರಾಣಹಾನಿ ಸಂಭವಿಸಿಲ್ಲ. ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಲ್ಯಾಂಬೋರ್ಗಿನಿಯಲ್ಲಿ ಜಾಲಿ ರೈಡ್ ಮಾಡುತ್ತಿದ್ದವನಿಗೆ ಬಿತ್ತು ಗೂಸಾ..