ಬೆಂಗಳೂರು:ಅಕ್ಕ ಪಕ್ಕದ ರಾಜ್ಯಗಳಲ್ಲೂ ಕೈಚಳಕ ತೋರಿದ್ದ ಕುಖ್ಯಾತ ಆರೋಪಿಯನ್ನು ಹೈದರಬಾದ್ನಲ್ಲಿ ಬಂಧಿಸಿದ ಸಿಸಿಬಿ ಪೊಲೀಸರು ಬುಧವಾರ ಕರೆ ತಂದಿದ್ದಾರೆ. ಹತ್ತು ಹಲವು ಪ್ರಕರಣದಲ್ಲಿ ಜೈಲು ಸೇರಿ ಮತ್ತೆ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಈತನ ಇತಿಹಾಸವೇ ರೋಚಕವಾಗಿದೆ.
ರಾಜ್ಯದೆಲ್ಲೆಡೆ, ನಗರದಲ್ಲಿ, ಪಕ್ಕದ ರಾಜ್ಯಗಳಲ್ಲೂ ಕೈಚಳಕ ತೋರಿದ್ದ ಆರೋಪಿಯನ್ನು ನಗರದ ಕೇಂದ್ರ ಅಪರಾಧ ದಳದ ಪೊಲೀಸರು ಹೈದರಬಾದ್ನಲ್ಲಿ ತಡರಾತ್ರಿ ಬಂಧಿಸಿದ್ದಾರೆ. ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕುಖ್ಯಾತ ಮನೆಗಳ್ಳತನ ಮಾಡುತ್ತಿದ್ದ ಆರೋಪಿ ಬಸವರಾಜ್ ಅಲಿಯಾಸ್ ಪ್ರಕಾಶ ಅಲಿಯಾಸ್ ಜಂಗ್ಲಿ ಎನ್ನುವವನನ್ನು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ. ಅಪರಾಧ ತನಿಖಾ ದಳದ ಪೊಲೀಸರು ಹೈದರಬಾದ್ನಲ್ಲಿ ಆರೋಪಿಯನ್ನು ಬಂಧಿಸಿ ಪಡೆದು 80 ಲಕ್ಷ ಮೌಲ್ಯದ 1 ಕೆ.ಜಿ. 367 ಗ್ರಾಂ ಚಿನ್ನಾಭರಣ, 1.50 ಲಕ್ಷ ರೂ ನಗದು, 2 ಕಾರನ್ನು ವಶ ಪಡಿಸಿಕೊಂಡಿದ್ದಾರೆ.
ಬಸವರಾಜ ತಮಿಳುನಾಡಿನಿಂದ ಐಷಾರಾಮಿ ಕಾರ್ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಆರೋಪಿ ಬಂಧನದಿಂದ ಈ ಹಿಂದೆ 10 ಕ್ಕೂ ಹೆಚ್ಚು ಪ್ರಕರಣದಲ್ಲಿ ಜೈಲೂಟ ಉಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಿಸಿಬಿ ಇನ್ಸ್ ಪೆಕ್ಟರ್ ಹಜರೇಶ್ ಕಿಲ್ಲೇದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನೆಡೆಸಿ ಬುಧವಾರ ತೆಲಂಗಾಣ ರಾಜ್ಯದ ಹೈದರಾಬಾದ್ನಿಂದ ಆರೋಪಿ ಬಂಧಿಸಿ ಪೊಲೀಸರು ಕರೆತಂದಿದ್ದಾರೆ.
ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ: ಸಿ.ಸಿ.ಬಿ ಪೊಲೀಸರು ಕಾರ್ಯಚರಣೆ ನೆಡೆಸಿ ಕಾರಿನಲ್ಲಿ ಬಂದು ಕನ್ನಕಳವು ಮಾಡುತ್ತಿದ್ದ ಅಂತರ ರಾಜ್ಯ ಕನ್ನ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧನ. 80 ಲಕ್ಷ ಬೆಲೆ ಬಾಳುವ 1 ಕೆ.ಜಿ 367 ಗ್ರಾಂ ಚಿನ್ನದ ಒಡವೆ, 1,50,000/-ರೂ ನಗದು ಹಣ ಹಾಗು ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರದ ಸಿಸಿಬಿ ಪೊಲೀಸರು ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಐಷರಾಮಿ ಕಾರಿನಲ್ಲಿ ಬಂದು ಕನ್ನ ಕಳವು ಮಾಡುತ್ತಿದ್ದ ಕುಖ್ಯಾತ ಕನ್ನಕಳ್ಳನನ್ನು ವಿಚರಣೆಗೊಳಪಡಿಸಿ 10 ಕನ್ನ ಕಳವು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿಯ ಹಿನ್ನಲೆ: ಆರೋಪಿಯು ಪೊಲೀಸರ ಕಣ್ಣು ತಪ್ಪಿಸಿ ಮನೆ ಕಳ್ಳತನ ಮಾಡುವ ಸಲುವಾಗಿ ವಿವಿಧ ಬಗೆಯ ಹೊಸ ಹೊಸ ಕಾರ್‌ಗಳನ್ನು ಉಪಯೋಗಿಸುತ್ತಿದ್ದ. ಬೆಂಗಳೂರಿನಲ್ಲಿ ಆರೋಪಿಯನ್ನು ಹಿಡಿಯುವ ಪ್ರಯತ್ನದಲ್ಲಿರುವಾಗ ರಾಜಧಾನಿಯನ್ನು ಬಿಟ್ಟು ತೆಲಂಗಾಣ ರಾಜ್ಯದ ಹೈದರಾಬಾದ್‌ನ ತಲೆ ಮರೆಸಿಕೊಂಡಿದ್ದ. ಹೈದರಾಬಾದ್ ನಿಂದ ಬೇರೆ ಬೇರೆ ಕಾರ್ ಗಳಲ್ಲಿ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ, ಇದಲ್ಲದೆ ಹೈದರಾಬಾದ್‌ನಲ್ಲಿ ಕೂಡ ಮನೆ ಕಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡಿದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ ಎಂದು ಹೇಳಲಾಗಿದೆ.