ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ತೀವ್ರತೆ ಜೋರಾಗಿದ್ದು, ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರೂಪಾಂತರ ಕೊರೊನಾ ಸೋಂಕು ಸಿಕ್ಕಸಿಕ್ಕವರಿಗೆ ಹರಡುತ್ತಿದ್ದು, ಇದರ ನಿಯಂತ್ರಣಕ್ಕೆ ಸರ್ಕಾರ ವಾರಾಂತ್ಯ ಕರ್ಫ್ಯೂ, ನೈಟ್ ಕರ್ಫ್ಯೂ ಅಂತ ದಾರಿ ಹುಡುಕಿ ಜಾರಿ ಮಾಡುತ್ತಿದೆ. ಹೀಗಿದ್ದರೂ ಕೊರೊನಾ ಕಂಟ್ರೋಲ್ಗೆ ಬಂತಾ ಅಂದರೆ, ಇಲ್ವವೇ ಇಲ್ಲ ಅಂತಿದೆ ನಿತ್ಯ ಬರುತ್ತಿರುವ ಕೊರೊನಾ ಬುಲೆಟಿನ್ ಅಂಕಿ ಅಂಶ.
ನಿನ್ನೆ ಒಂದೇ ದಿನ 34 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ದೃಢಪಟ್ಟಿದ್ದು ಇನ್ನಷ್ಟು ಆತಂಕ ಮೂಡಿಸಿದೆ. ಸೋಂಕಿತರ ಸಂಖ್ಯೆ ಮಾತ್ರವಲ್ಲದೇ ಸಾವಿನ ಪ್ರಮಾಣ ಹಾಗೂ ಐಸಿಯು ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಈ ನಡುವೆ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ, ಬೆಡ್ ಸಮಸ್ಯೆ ಉಲ್ಬಣಗೊಂಡಿದೆ.
ಹೀಗಾಗಿ ಸೋಂಕಿತರನ್ನ ಆಸ್ಪತ್ರೆಯಿಂದ ಬಹುಬೇಗ ಡಿಸ್ಚಾರ್ಜ್ ಮಾಡುತ್ತಿದ್ದಾರೆ. ಕೋವಿಡ್ ರೋಗಲಕ್ಷಣ ಕಡಿಮೆ ಇರುವವರು, ರೋಗಲಕ್ಷಣ ಇಲ್ಲದಿರುವ ಸೋಂಕಿತರನ್ನು ಆಸ್ಪತ್ರೆಯಲ್ಲಿ ಕನಿಷ್ಠ ಮೂರರಿಂದ ಆರು ದಿನಗಳ ಕಾಲ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗುತ್ತಿದೆ. ನಂತರ ಸೋಂಕಿತರು ಮನೆಯಲ್ಲಿ ಹೋಂ ಐಸೋಲೇಷನ್ ಇರಬೇಕು. ಇನ್ನು ಸೋಂಕಿನ ತೀವ್ರತೆ ಹೆಚ್ಚು ಇರುವವರು, ಉಸಿರಾಟದ ತೊಂದರೆ ಇರುವವರು ಹೆಚ್ಚಿನ ನಿಗಾವಹಿಸಲು 10 ದಿನಗಳ ಕಾಲ ಚಿಕಿತ್ಸೆಯನ್ನ ನೀಡಲಾಗುತ್ತೆ.
ಗುಣಮುಖರ ಸಂಖ್ಯೆಯು ಏರಿಕೆ