ಬೆಂಗಳೂರು:ಸ್ಯಾಂಡಲ್ವುಡ್ನ ಹೆಸರಾಂತ ನಟಪುನೀತ್ ರಾಜ್‌ಕುಮಾರ್ ಸಾವನ್ನಪ್ಪಿ 9 ದಿನ ಕಳೆದಿವೆ. ಕಂಠೀರವ ಸ್ಟುಡಿಯೋದಲ್ಲಿ ಹಾಲು,ತುಪ್ಪ ಕಾರ್ಯಕ್ರಮ ಮುಗಿದು 5 ದಿನವಾಯಿತು. ಆದರೆ ಜನಜಂಗುಳಿ ತಗ್ಗುವ ಸೂಚನೆ ಕಂಡುಬರುತ್ತಿಲ್ಲ. ಮಳೆ, ಚಳಿ ಲೆಕ್ಕಿಸದೆ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ನಡುವೆ ಶನಿವಾರ ಪುನೀತ್ ಸಮಾಧಿ ಸ್ಥಳದಲ್ಲೇ ಮದುವೆಯಾಗಬೇಕು ಬಳ್ಳಾರಿಯಿಂದ ಗಂಗಾ ಮತ್ತು ಗುರು ಪ್ರಸಾದ್ ಎಂಬ ಪ್ರೇಮಿಗಳು ಬಂದಿದ್ದರು. 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಈ ಜೋಡಿ, ಅಪ್ಪು ಸಮಾಧಿ ಸ್ಥಳದಲ್ಲೇ ಮದುವೆಯಾಗುವುದಾಗಿ ಪೊಲೀಸರೆದುರು ಪಟ್ಟು ಹಿಡಿದರು. ರಾಘಣ್ಣ, ಶಿವಣ್ಣ ಸಹ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಈ ಜೋಡಿ ಹೇಳಿದರು.