ಬೆಂಗಳೂರು :ಬೆಂಗಳೂರು ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಚರ್ಚ್ ಸ್ಟ್ರೀಟ್‌ನಲ್ಲಿ ಗಸ್ತಿನಲ್ಲಿರುವಾಗಲೇ ಪಬ್‌ವೊಂದರ ಮಹಡಿಯಿಂದ ಬಿದ್ದು ಇಬ್ಬರು ಪ್ರೇಮಿಗಳು ಸಾವನ್ನಪ್ಪಿದ್ದಾರೆ.
ಕುಡಿದ ಮತ್ತಿನಲ್ಲಿ ಪಬ್ ಮಹಡಿಯಿಂದ ಬಿದ್ದು ಪ್ರೇಮಿಗಳು ಸಾವು.. ಇವರ ಜೀವನಕ್ಕೆ ಈ ವೀಕ್'ಎಂಡ್'ಆಯ್ತು.. - Kannada news
ಮೀಡಿಯಾ ಮ್ಯಾನೇಜ್‌ಮೆಂಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಪವನ್ ಹಾಗೂ ಐಬಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇದಾ ಎಂಬುವರು ವಿಕೇಂಡ್ ಹಿನ್ನೆಲೆಯಲ್ಲಿ ಮೋಜು-ಮಸ್ತಿ ಮಾಡಲು ಚರ್ಚ್ ಸ್ಟ್ರೀಟ್‌ನಲ್ಲಿರುವ ಆ್ಯಶ್ ಬಿಯರ್ ಪಬ್‌ಗೆ ಬಂದಿದ್ದರು.
ಕುಡಿದ ಮತ್ತಿನಲ್ಲಿ ಪಬ್ ಮಹಡಿಯಿಂದ ಬಿದ್ದು ಪ್ರೇಮಿಗಳು ಸಾವು
ಪವನ್ ಅತ್ತಾವರ್ ಹಾಗೂ ವೇದ ಎಂಬುವರು ಸಾವನ್ನಪ್ಪಿದ ಪ್ರೇಮಿಗಳು. ಮೀಡಿಯಾ ಮ್ಯಾನೇಜ್‌ಮೆಂಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಪವನ್ ಹಾಗೂ ಐಬಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇದಾ, ವಿಕೇಂಡ್ ಹಿನ್ನೆಲೆಯಲ್ಲಿ ಮೋಜು-ಮಸ್ತಿಮಾಡಲು ಚರ್ಚ್ ಸ್ಟ್ರೀಟ್‌ನಲ್ಲಿರುವ ಆ್ಯಶ್ ಬಿಯರ್ ಪಬ್‌ಗೆ ಬಂದಿದ್ದರು.
ಕುಡಿದ ಮತ್ತಿನಲ್ಲಿ ಮಹಡಿಯಿಂದ ಇಬ್ಬರೂ ಕೆಳಗಿಳಿಯುವಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ . ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.