ಬೆಂಗಳೂರು:ರೈಲು ಹಳಿಗೆ ತಲೆ ಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೊಸಕೋಟೆ ಸಮೀಪದ ಕನ್ನಮಂಗಲದ ನಿವಾಸಿ ಚೇತನಾ (20) ಹಾಗೂ ಸಿರಸ್ ಚಂದ್ರ (21) ಆತ್ಮಹತ್ಯೆಗೆ ಶರಣಾದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರಂನ ಸೌತ್ ಈಸ್ಟ್ ಏಷ್ಯನ್ (ಎಸ್‌ಇಎ) ಕಾಲೇಜಿನಲ್ಲಿ ಬಿಪಿಎ ವ್ಯಾಸಂಗ ಮಾಡುತ್ತಿದ್ದ ಚೇತನಾ ಮತ್ತು ಸಿರಸ್ ಚಂದ್ರ ಅವರೇ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಇಬ್ಬರೂ ಶುಕ್ರವಾರ ಸಂಜೆ ಹೊರಮಾವು ರೈಲ್ವೆ ಬ್ರಿಡ್ಜ್ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.