ಆನೇಕಲ್ : ಪ್ರೇಮ ವಿವಾಹಕ್ಕೆ ಕುಟುಂಬದವರು ಒಪ್ಪಲಿಲ್ಲ ಎಂದು ಯುವ ಪ್ರೇಮಿಗಳು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಮಂದೂರು ದಿನ್ನೆ ರೈಲ್ವೆ ಹಳಿ ಮೇಲೆ ನಿನ್ನೆ ಸಂಜೆ ಹೊಸೂರು ಕಡೆಗೆ ಹೊರಟಿದ್ದ ರೈಲಿಗೆ ಪ್ರೇಮಿಗಳು ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಮಂದೂರು ಬಳಿಯ ಮಾರನಾಯಕನಹಳ್ಳಿಯ ಮಣಿ ಮತ್ತು ತಮಿಳುನಾಡಿನ ಕೊತ್ತಗೊಂಡಪಲ್ಲಿಯ ಅನುಷಾ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು ಎಂದು ಗುರುತಿಸಲಾಗಿದೆ. ಭಾನುವಾರ ಮಾರನಾಯಕನಹಳ್ಳಿಯ ಹುಡುಗನ ಮನೆ ಬಳಿ ಇಬ್ಬರು ಕಾಣಿಸಿಕೊಂಡಿದ್ದರು. ಈ ಕುರಿತು ಹುಡುಗಿಯ ಮನೆಗೆ ಹುಡುಗನ ಸಂಬಂಧಿಕರು ವಿಷಯ ಮುಟ್ಟಿಸಿದ್ದರಂತೆ. ಅನಂತರ ಸಂಜೆಯ ವೇಳೆಗೆ ಇಬ್ಬರ ಮೃತ ದೇಹಗಳು ರೈಲ್ವೆ ಹಳಿಯ ಮೇಲೆ ಕಾಣಿಸಿಕೊಂಡಿವೆ.